ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮ ಪಾಲಿಸಬೇಕು

ನಾಲ್ಕನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ರಾಜ್ಯದಲ್ಲಿ ಬಸ್ ಸಂಚಾರದ ಜೊತೆಗೆ ರೈಲು ಸಂಚಾರವೂ. ಆರಂಭವಾಗಿದೆ.

ಆರಂಭಿಕ ಹಂತದಲ್ಲಿ ಬೆಂಗಳೂರುಬೆಳಗಾವಿ, ಬೆಂಗಳೂರುಮೈಸೂರು ರೈಲು ಸಂಚಾರ ಶುರುವಾಗಿದ್ದು, ಜೂನ್ 1ರಿಂದ ಬಹುತೇಕ ರೈಲುಗಳು ಸಂಚಾರ ಆರಂಭಿಸಲಿವೆ.

ಪ್ರಯಾಣಿಕರು ಆನ್ ಲೈನ್ ನಲ್ಲಿ ಟಿಕೆಟ್ ಪಡೆಯಬೇಕಾಗಿದ್ದು, ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರೈಲು ಹೊರಡುವ 90 ನಿಮಿಷ ಮುಂಚಿತವಾಗಿಯೇ ಪ್ರಯಾಣಿಕರು ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ.

ರೈಲು ಏರುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದು, ರೋಗ ಲಕ್ಷಣ ಇರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ.

ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ. ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ ರೈಲಿನಲ್ಲಿ ತಿಂಡಿತಿನಿಸು, ಟೀ, ಕಾಫಿ ಅಥವಾ ಕುಡಿಯುವ ನೀರು ಸೇರಿದಂತೆ ಏನನ್ನೂ ಮಾರಾಟ ಮಾಡಲಾಗುವುದಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!