ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಅನುಮತಿ, ಶೇ.50ರಷ್ಟು ಬೆಲೆ ಹೆಚ್ಚಳ

ಒಡಿಶಾ: ಮದ್ಯದ ಬೆಲೆಯಲ್ಲಿ ಶೇ.50ರಷ್ಟು ಬೆಲೆ ಹೆಚ್ಚಿಸಿ ಒಡಿಶಾ ಸರ್ಕಾರ ಆದೇಶ ಹೊರಡಿಸಿದೆ. ವಿದೇಶಿ ಮದ್ಯದ ಮೇಲೆ ‘ಕೋವಿಡ್ ವಿಶೇಷ ಶುಲ್ಕ’ವಾಗಿ ಈ ದರ ಹೆಚ್ಚಿಸಿದ್ದು, ಮದ್ಯಪ್ರಿಯರಿಗೆ ವಿದೇಶಿ ಮದ್ಯ ಸ್ವಲ್ಪ ದುಬಾರಿಯಾಗಿದೆ. 2019-20ರ ಎಂಆರ್ಪಿ ದರದಲ್ಲಿ ಶೇ.50ರಷ್ಟು ಬೆಲೆ ಹೆಚ್ಚಿಸಿದೆ. ಅಲ್ಲದೆ, ಕಂಟೈನ್ಮೆಂಟ್ ಝೋನ್ನ ಹೊರಗಿರುವ ಪರವಾನಗಿ ಹೊಂದಿರುವ ಅಂಗಡಿಗಳವರು ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅಂಗಡಿಗಳಲ್ಲಿ ಅಥವಾ ಅಂಗಡಿಯ ಆವರಣದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಒಡಿಶಾ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

Share Post

Leave a Reply

Your email address will not be published. Required fields are marked *

error: Content is protected !!