ಚಿಕನ್, ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಕಳೆದ ಕೆಲವೇ ತಿಂಗಳ ಹಿಂದಷ್ಟೇ ಚಿಕನ್ ಕೇಳುವವರೇ ಇಲ್ಲದಂತಾಗಿತ್ತು. ಸಾವಿರಾರು ಸಂಖ್ಯೆಯ ಕೋಳಿಗಳನ್ನು ಫಾರಂ ಮಾಲೀಕರು ಜೀವಂತ ಸಮಾಧಿ ಮಾಡಿದ್ದರು.

ಕೋಳಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎಂಬ ಗಾಳಿ ಸುದ್ದಿ ಹಬ್ಬಿಸಿದ ಕಾರಣ ಚಿಕನ್ ತಿನ್ನುವುದನ್ನು ಜನ ಬಿಟ್ಟಿದ್ದರು. ನಂತರದಲ್ಲಿ ಲಾಕ್ಡೌನ್ ಮುಂದುವರೆದಂತೆ ಕೋಳಿ ಮತ್ತು ಮಾಂಸ ಬೇಡಿಕೆ ಹೆಚ್ಚು, ಕಡಿಮೆಯಾಗಿತ್ತು.

ಇತ್ತೀಚೆಗೆ ಕೋಳಿ ಮತ್ತು ಮಾಂಸದ ಬೇಡಿಕೆ ಜಾಸ್ತಿಯಾಗಿ ಬೆಲೆ ವಿಪರೀತ ಹೆಚ್ಚಳವಾಗಿದೆ. ಇನ್ನು ಸಭೆಶುಭ ಸಮಾರಂಭಗಳು ರದ್ದಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಖರೀದಿ ಮಾಡುತ್ತಿಲ್ಲ. ಹೀಗಿದ್ದರೂ ಮಾಂಸದ ದರ ಕಡಿಮೆಯಾಗಿಲ್ಲ.

ಲಾಕ್ಡೌನ್ ಗಿಂತ ಮೊದಲು ಕೆಜಿಗೆ 600 ರೂ. ವರೆಗೂ ಇದ್ದ ಮಟನ್ ದರ ಈಗ 700 – 800 ರೂಪಾಯಿ ವರೆಗೂ ಇದೆ. ಲಾಕ್ ಡೌನ್ ಇರುವುದರಿಂದ ಸಂತೆಗಳು ನಡೆಯುತ್ತಿಲ್ಲದ ಕಾರಣ ಕುರಿ, ಮೇಕೆಗಳು ಮಾರಾಟಕ್ಕೆ ಬರುತ್ತಿಲ್ಲಸಾಕಾಣೆದಾರರಿಂದ ನೇರವಾಗಿ ಖರೀದಿಸುವ ಪರಿಸ್ಥಿತಿ ಇದೆ. ಇನ್ನು ಮರಿ ಕೋಳಿ ದೊಡ್ಡದಾಗಲು ಕನಿಷ್ಠ 45 ರಿಂದ 60 ದಿನ ಕಾಲಾವಕಾಶ ಬೇಕಿದ್ದು, ಕೋಳಿ ಮಾಂಸ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಚಿಕನ್ ಕೆಜಿಗೆ 240 ರಿಂದ 250 ರೂಪಾಯಿವರೆಗೂ ದರ ಇದೆ ಎನ್ನಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!