ಪೊಲೀಸರಿಗೆ ದೂರು ಕೊಟ್ಟ ಬಾಲಕ .!ಕಾರಣ ಕೇಳಿ ಶಾಕ್ ಆದ ಪೊಲೀಸರು.!

8 ವರ್ಷದ ಬಾಲಕನೊಬ್ಬ ಅಕ್ಕ ಮತ್ತು ಇತರ ನಾಲ್ವರು ಹುಡುಗಿಯರನ್ನು ಬಂಧಿಸುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ದೂರು ಕೇಳಿ ಪೊಲೀಸರೂ ಒಂದು ಕ್ಷಣ ದಂಗಾಗಿದ್ದರು…!

ದೂರು ಪಡೆದ ಪೊಲೀಸರು ಬಾಲಕನ `ಸಮಸ್ಯೆಗೊಂದು ಪರಿಹಾರವನ್ನೂ ಕಂಡುಕೊಂಡಿದ್ದರು. ಸದ್ಯ ಮುಗ್ಧ ಕತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಮುಗ್ಧ ಮನಸ್ಸಿನ ಹುಡುಗ.
ಮಕ್ಕಳ ಮನಸ್ಸು ಎಂದೂ ಪರಿಶುದ್ಧಅಲ್ಲಿ ಕಪಟ ಇರುವುದಿಲ್ಲ. ಖುಷಿ ಇರಲಿ, ದುಃಖವಿರಲಿ, ಕೋಪವಿರಲಿ, ಸ್ನೇಹವಿರಲಿ ಎಲ್ಲಾ ಸಹಜವಾಗಿರುತ್ತವೆ. ಮುಗ್ಧತೆಯೇ ಎಲ್ಲರನ್ನು ಬಹುವಾಗಿ ಸೆಳೆಯುವುದು. ಹೀಗಾಗಿಯೇ, ಬಾಲ್ಯದ ದಿನಗಳು ತುಂಬಾ ಸುಂದರವಾಗಿರುವುದು. ಆಟ, ಪಾಠದೊಂದಿಗೆ ಕಳೆಯುವ ದಿನಗಳೇ ಅಪೂರ್ವ. ಬಾಲ್ಯದ ತುಂಟಾಟಗಳೂ ಮನಸ್ಸಿಗೆ ಆಪ್ಯಾಯಮಾನ. ಆದರೆ, ಕೆಲವೊಮ್ಮೆ ತುಂಟಾಟ ಮನೆಯವರನ್ನೂ ಪೀಕಲಾಟಕ್ಕೆ ಸಿಲುಕಿಸುವುದೂ ಇದೆ. ಇದು ಕೂಡಾ ಅಂತಹದ್ದೇ ಮುಗ್ಧ ಬಾಲಕನೊಬ್ಬನ ತುಂಟಾಟ ಮತ್ತು ನೋವಿನ ಕತೆ. ಮುಗ್ಧ ನೋವಿನ ಕತೆ ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.
ಅಕ್ಕನನ್ನು ಬಂಧಿಸಿ
ಬಾಲಕ ಸೀದಾ ಪೊಲೀಸರಿದ್ದಲ್ಲಿಗೆ ಬಂದಿದ್ದ. ಬಂದವರನೇ, `ಅಂಕಲ್ ನನ್ನ ಅಕ್ಕ ಮತ್ತು ನಾಲ್ಕು ಹುಡುಗಿಯರನ್ನು ಬಂಧಿಸಿಎಂದು ಅಧಿಕಾರಿಗಳ ಬಳಿ ಹೇಳಿದ್ದ…! ಎಂಟು ವರ್ಷದ ಬಾಲಕನ ದೂರು ಕೇಳಿ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದರು. `ಯಾಕಪ್ಪ ನಿನ್ನ ಅಕ್ಕನನ್ನು ಬಂಧಿಸಬೇಕುಎಂದು ಅವರು ಕೇಳಿದರು. ಅದಕ್ಕೆ ಬಾಲಕ ಕೊಟ್ಟ ಉತ್ತರ ಪೊಲೀಸರನ್ನು ಒಂದು ಕ್ಷಣ ನಗುವಂತೆ ಮಾಡಿದರೂ ಮತ್ತೊಂದು ಕ್ಷಣದಲ್ಲಿ ಮರುಕ ಉಂಟು ಮಾಡಿತ್ತು. ಬರೀ ಬಾಯಿ ಮಾತಿನಲ್ಲಿ ಬಾಲಕ ದೂರು ಕೊಟ್ಟಿರಲಿಲ್ಲ. ಮೂರನೇ ಕ್ಲಾಸಿನ ವಿದ್ಯಾರ್ಥಿ ಇಂಗ್ಲೀಷ್ನಲ್ಲಿ ದೂರನ್ನು ಬರೆದು ಕೂಡಾ ಕೊಟ್ಟಿದ್ದ. ದೂರಿನಲ್ಲಿ ತನ್ನ ಅಕ್ಕ ಸೇರಿದಂತೆ ನಾಲ್ವರು ಹುಡುಗಿಯರ ಹೆಸರನ್ನೂ ಬರೆದಿದ್ದ ಬಾಲಕ.

ಯಾರೂ ಆಟಕ್ಕೆ ಸೇರಿಸುತ್ತಿಲ್ಲ…!
ತನ್ನ ಹತ್ತು ವರ್ಷದ ಅಕ್ಕನ ಜೊತೆಗೆ 14 ವರ್ಷದ ಇತರ ಇಬ್ಬರು ಹುಡುಗಿಯರು, 18 ವರ್ಷದ ಯುವತಿ ಮತ್ತು 15 ವರ್ಷದ ಇನ್ನೊಬ್ಬಾಕೆಯ ವಿರುದ್ಧ ಈತ ದೂರು ಕೊಟ್ಟಿದ್ದ. ಇಷ್ಟಕ್ಕೂ ಬಾಲಕ ತನ್ನ ಅಕ್ಕ ಹಾಗೂ ಆಕೆಯ ಸ್ನೇಹಿತೆಯರ ವಿರುದ್ಧ ದೂರು ಕೊಡಲು ಕಾರಣ ಲಾಕ್ಡೌನ್ ಸಮಯದಲ್ಲಿ ಅವರ್ಯಾರೂ ತನ್ನೊಂದಿಗೆ ಆಡಲು ಬರುತ್ತಿಲ್ಲವೆಂಬ ಸಿಟ್ಟು…! ಇದು ಕೇರಳದಲ್ಲಿ ನಡೆದ ಘಟನೆ. `ಅವರು ನಾನು ಹುಡುಗ ಎಂದು ತಮಾಷೆ ಮಾಡುತ್ತಿರುತ್ತಾರೆ. ನನ್ನನ್ನು ಅವರು ಆಟಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಲುಡೋ, ಶೆಟಲ್, ಬ್ಯಾಡ್ಮಿಂಟನ್ ಯಾವ ಆಟದಲ್ಲೂ ನನ್ನನ್ನು ಅವರು ಸೇರಿಸಿಕೊಳ್ಳುತ್ತಿಲ್ಲ. ಅವರನ್ನು ಬಂಧಿಸಿಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದ ಬಾಲಕ ಬಳಿಕ ತಾನು ಬರೆದಿದ್ದ ದೂರನ್ನೂ ಪೊಲೀಸರ ಕೈಗಿಟ್ಟಿದ್ದ.

`ಪೊಲೀಸರಿಗೆ ದೂರು ಕೊಡು
ಬಾಲಕ ಪೊಲೀಸರಿಗೆ ಹೋಗಿ ದೂರು ಕೊಡುವುದಕ್ಕೂ ಒಂದು ಕಾರಣ ಇತ್ತು. ಅದೇನೆಂದರೆ, ಮೊದಲು ಈತ ತನ್ನ ತಂದೆ ಬಳಿ ದೂರು ಕೊಂಡೊಯ್ದಿದ್ದ. ಆಗ ಅವರು ತಮಾಷೆಗೆಂದು `ನನ್ನಲ್ಲಿ ಹೇಳ್ಬೇಡ, ಪೊಲೀಸರಿಗೆ ಕಂಪ್ಲೇಂಟ್ ಕೊಡುಎಂದು ಹೇಳಿದ್ದರು. ತಮಾಷೆಯ ಮಾತನ್ನೇ ನಂಬಿದ ಬಾಲಕ ಸೀದಾ ಪೊಲೀಸರಿದ್ದಲ್ಲಿಗೆ ಹೋಗಿ ತನ್ನ ದೂರನ್ನು ಒಪ್ಪಿಸಿದ್ದ…! `ನಾನು ಎಷ್ಟು ಸಲ ಕೇಳಿ ಕೊಂಡರೂ ಅಕ್ಕಂದಿರು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುವುದೇ ಇಲ್ಲಎಂದು ಬಾಲಕ ನೊಂದುಕೊಂಡಿದ್ದ. ಅಂದು ಬಾಲಕನಿಂದ ದೂರು ಪಡೆದಿದ್ದವರು ಕಸ್ಬಾ ಪೊಲೀಸ್ ಠಾಣೆಯ ಅಧಿಕಾರಿಗಳಾದ ಯುಪಿ ಉಮೇಶ್ ಮತ್ತು ಕೆ ಟಿ ನಿರಾಜ್. ಇಲ್ಲಿ ಪೊಲೀಸರ ಕಾರ್ಯವನ್ನೂ ಮೆಚ್ಚಲೇಬೇಕು. ನಂಬಿ ಬಂದ ಬಾಲಕನ ಮನಸ್ಸು ನೋಯಿಸುವ ಕೆಲಸವನ್ನು ಪೊಲೀಸರು ಮಾಡಲಿಲ್ಲ…!

ಮೆಚ್ಚಬೇಕು ಪೊಲೀಸರನ್ನು
ಬಾಲಕನ ಪಕ್ಕದ ಮನೆಯ ಯಾವುದೋ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಬಂದಿದ್ದ ವೇಳೆ ಈತ ಪೊಲೀಸರಿಗೆ ತನ್ನ ದೂರನ್ನು ಕೊಟ್ಟಿದ್ದ. ಆದರೆ, ಅದಾಗಲೇ ಸಂಜೆ ಆಗಿದ್ದರಿಂದ ಮರುದಿನ ಬರುವುದಾಗಿ ಹೇಳಿ ಪೊಲೀಸರು ಹೋಗಿದ್ದರು. ಆದರೆ, ಇವರು ಮಾತು ತಪ್ಪಲಿಲ್ಲ. ಬಾಲಕನಿಗೆ ಕೊಟ್ಟ ಮಾತಿನಂತೆ ಮರುದಿನ ಈತನ ಮನೆಗೆ ಬಂದು ಪೊಲೀಸರು ಹುಡುಗನನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ಹೇಳಿ ಸಮಸ್ಯೆಗೊಂದು ಪರಿಹಾರ ಸೂಚಿಸಿದ್ದರು. ವೇಳೆ, ತಮ್ಮ ನಮ್ಮ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತಾನೆ ಎಂದು ನಾವು ನಂಬಿರಲಿಲ್ಲ ಎಂದೂ ಅಕ್ಕಂದಿರು ಹೇಳಿದ್ದಾರೆ. ಅಲ್ಲದೆ, ತಮ್ಮನನ್ನು ಆಟದಲ್ಲಿ ಸೇರಿಸಿಕೊಳ್ಳುವುದಾಗಿ ಇವರೆಲ್ಲಾ ಒಪ್ಪಿಕೊಂಡಿದ್ದಾರಂತೆ. ಹೀಗಾಗಿ, ಪುಟಾಣಿಯ ಖುಷಿಗೆ ಈಗ ಪಾರವೇ ಇಲ್ಲಸದ್ಯ ಪುಟಾಣಿಯ ಮುಗ್ಧ ದೂರಿನ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಅಲ್ಲದೆ, ಬಾಲಕನ ದೂರಿಗೆ ಪೊಲೀಸರು ಸ್ಪಂದಿಸಿದ ರೀತಿಯನ್ನೂ ಶ್ಲಾಘಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!