ಕಾಲ್ನಡಿಗೆಯಲ್ಲಿ ಊರಿಗೆ ಹೊರಟ ಕಾರ್ಮಿಕರಿಗೆ ನೆರವಾದ ಬಾಲಿವುಡ್ ನಟ ‘ಸೋನು ಸೂದ್’

ಕೊರೊನಾ ವೈರಸ್ ಸೋಂಕಿನ ಮಧ್ಯೆ ಜನರು ತಮ್ಮೂರು ಸೇರುವ ಪ್ರಯತ್ನದಲ್ಲಿದ್ದಾರೆ. ಅನೇಕರು ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೋಗ್ತಿದ್ದಾರೆ. ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರಿಗೆ ಸೆಲೆಬ್ರಿಟಿಗಳು ಸಹಾಯ ಮಾಡ್ತಿದ್ದಾರೆ. ಇದ್ರಲ್ಲಿ ಬಾಲಿವುಡ್ ನಟ ಸೋನು ಸೂದ್ ಕೂಡ ಹೊರತಾಗಿಲ್ಲ. ಊರಿಗೆ ಕಾಲ್ನಡಿಗೆಯಲ್ಲಿ ಹೋಗ್ತಿರುವ ಕಾರ್ಮಿಕರ ಸಹಾಯಕ್ಕೆ ಬಂದಿದ್ದಾರೆ.

ಸೋನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಹಾರ್ ಮೂಲದ ವ್ಯಕ್ತಿಯೊಬ್ಬ ಸೋನುಗೆ ಟ್ವೀಟ್ ಮಾಡಿದ್ದ. ಮನೆಗೆ ಹೋಗಲು ಅಲೆಯುತ್ತಿದ್ದೇನೆ ಎಂದಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋನು, ಚಿಂತಿಸುವ ಅಗತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಊರು ಸೇರುವ ವ್ಯವಸ್ಥೆ ಮಾಡ್ತೇನೆಂದು ಸೋನು ಹೇಳಿದ್ದಾರೆ.

ಸೋನು ಈ ಮೊದಲು ಕೂಡ ಅನೇಕ ಕಾರ್ಮಿಕರನ್ನು ಮನೆಗೆ ತಲುಪಿಸಿದ್ದರು. ಟ್ವಿಟರ್ ಮೂಲಕ ನನ್ನನ್ನು ಸಂಪರ್ಕಿಸಿ, ನಾನು ಸಹಾಯ ಮಾಡ್ತೇನೆಂದು ಸೋನು ಹೇಳಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!