ಪಾಕ್ ವಿಮಾನ ದುರಂತ..! ಪವಾಡ ಸದೃಶ್ಯದಂತೆ ಬದುಕುಳಿದ ಬ್ಯಾಂಕ್ ಸಿಇಓ

ಪಾಕಿಸ್ತಾನದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು, ಸಿಬ್ಬಂದಿಯೂ ಸೇರಿದಂತೆ ವಿಮಾನದಲ್ಲಿದ್ದ ಸುಮಾರು 107 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಹೋರ್ನಿಂದ ಕರಾಚಿಗೆ ಬರುತ್ತಿದ್ದ PIA ಗೆ ಸೇರಿದ ಏರ್ಬಸ್ A320 ನಂಬರ್ ವಿಮಾನ ಅಪಘಾತಕ್ಕೀಡಾಗಿತ್ತು.

ಕರಾಚಿಗೆ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಮಾಲಿರ್ ಮಾಡೆಲ್ ಕಾಲೋನಿ ಬಳಿಯ ಜಿನ್ನಾ ಗಾರ್ಡ್ನ್ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಜನವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದರಿಂದ ಅಲ್ಲಿನ ಸ್ಥಳೀಯರು ಕೂಡ ವಿಮಾನದ ಅಡಿಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.

ಅದೃಷ್ಟ ಎಂಬಂತೆ ಪಾಕಿಸ್ತಾನದ ಬ್ಯಾಂಕ್ ಆಫ್ ಪಂಜಾಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಫರ್ ಮಸೂದ್ ಅಪಘಾತದಲ್ಲಿ ಬದುಕುಳಿದಿದ್ದಾರೆ ಘಟನೆಯಲ್ಲಿ ಮಸೂದ್ ಗೆ ಸಣ್ಣಪುಟ್ಟ ಗಾಯಗಳಲಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅಪಾಯದಿಂದ ಪಾರಾಗಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಘಟನೆಯಲ್ಲಿ ಇನ್ನಷ್ಟು ಜನ ಬದುಕುಳಿಯುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತಿದೆ‌.

Share Post

Leave a Reply

Your email address will not be published. Required fields are marked *

error: Content is protected !!