ಮದ್ಯಪ್ರಿಯರೇ ಗಮನಿಸಿ: ಇಂದು ಸಂಜೆಯಿಂದಲೇ ಕಂಪ್ಲೀಟ್ ‘ಬಂದ್’ ಆಗಲಿದೆ ಮದ್ಯದಂಗಡಿ

ರಾಜ್ಯ ಸರ್ಕಾರ ಪ್ರತಿ ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿದ್ದು, ಈ ಮೊದಲ ಲಾಕ್ ಡೌನ್ ನಾಳೆ ಜಾರಿಯಾಗಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಬಂದ್ ಆಗಲಿವೆ.

ಲಾಕ್ ಡೌನ್ ಜಾರಿಯಾದ ಬಹುದಿನಗಳ ಬಳಿಕ ತೆರೆದಿದ್ದ ಮದ್ಯದಂಗಡಿಗಳೂ ಸಹ ಕಂಪ್ಲೀಟ್ ಲಾಕ್ ಡೌನ್ ಪ್ರಯುಕ್ತ ಭಾನುವಾರದಂದು ತೆರೆಯುವುದಿಲ್ಲ.

ಇಂದು ಸಂಜೆ 7 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿದ್ದು, ಸೋಮವಾರ ಎಂದಿನಂತೆ ಪುನಃ ಕಾರ್ಯಾರಂಭ ಮಾಡಲಿವೆ. ಹೀಗಾಗಿ ಮದ್ಯಪ್ರಿಯರು ಇಂದೇ ಮದ್ಯ ಖರೀದಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!