ಪ್ರಯೋಗಾಲಯದಲ್ಲಿ ತಯಾರಾಗುತ್ತಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ಸತ್ವಭರಿತ ತರಕಾರಿ”

ಫ್ಯೊಂಗ್ ಯಾಂಗ್‌ : “ಸುರಕ್ಷಿತವಾಗಿರಿ -ಆರೋಗ್ಯದಿಂದಿರಿ’ ಇದು ಈಗ ಜಗತ್ತು ಪಠಿಸುತ್ತಿರುವ ಮಂತ್ರ. ಕೋವಿಡ್‌ನಿಂದ ಸುರಕ್ಷಿತವಾಗಿರಲು ಮತ್ತು ಆರೋಗ್ಯದಿಂದಿರಲು ಜನರು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಇದೀಗ ಪ್ರಯೋಗಾಲಯದಲ್ಲೇ ವೈರಸ್‌ಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿಗಳನ್ನು ತಯಾರಿಸಲಾಗಿದೆ.

ವಿಚಿತ್ರ ಎಂದೆನಿಸುತ್ತಿದೆಯೇ? ಕೋವಿಡ್‌ ಕಾಲದಲ್ಲಿ ಇಂಥ ವಿಚಿತ್ರಗಳು ಸಂಭವಿಸಬಹುದು ಎನ್ನುವುದಕ್ಕೆ ಉತ್ತರ ಕೊರಿಯವೇ ಸಾಕ್ಷಿ. ಇಲ್ಲಿನ ಪ್ರಯೋಗಾಲಯದಲ್ಲಿ ವಿವಿಧ ರೀತಿಯ ಸತ್ವಭರಿತ ತರಕಾರಿಗಳು (ಫ‌ಂಕ್ಷನಲ್‌ ವೆಜಿಟಬಲ್ಸ್‌) ತಯಾರಾಗುತ್ತಿವೆ.

ಗೈನುರ ಬಯೊಕಲರ್‌ ವೆಜಿಟಬಲ್‌ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿದೆ ಈ ತರಕಾರಿ. ಹೊರಗೆ ಗಿಡಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಇರುವುದಕ್ಕಿಂತ ಸುಮಾರು ಶೇ.30ರಷ್ಟು ಹೆಚ್ಚು ಕಬ್ಬಿಣದ ಅಂಶ ಇರುವ ತರಕಾರಿಗಳನ್ನು ತಯಾರಿಸಿದ್ದೇವೆ. ಬಾಣಂತಿಯರಿಗೆ ಮತ್ತು ಅನೀಮಿಯ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಈ ತರಕಾರಿ ಎನ್ನುತ್ತಾರೆ ಓರ್ವ ಸಂಶೋಧಕ.

 

Share Post

Leave a Reply

Your email address will not be published. Required fields are marked *

error: Content is protected !!