ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಸಿಗಲಿದೆ ಮತ್ತಷ್ಟು ಲಾಭ..!

ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಅನುಕೂಲ ಆಗಲಿ ಅಂತ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ‌. ಈಗಾಗಲೇ ಇದರ ಲಾಭವನ್ನು ರೈತರು ಪಡೆಯುತ್ತಿದ್ದಾರೆ. ಅನೇಕ ರೈತರ ಖಾತೆಗೆ ಈ ಯೋಜನೆಯಡಿ ಹಣ ಕೂಡ ಹೋಗಿದೆ. ಈ ಯೋಜನೆಯಲ್ಲಿ ಇನ್ನು ಹಲವು ಲಾಭಗಳಿವೆ. ಏನು ಆಂತೀರಾ ಮುಂದೆ ಓದಿ. ಹೌದು, ಕಿಸಾನ್ ಸಮ್ಮಾನ್ ಯೋಜನೆಯಡಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಪಡೆಯಬಹುದು. ಸರ್ಕಾರದಿಂದ ಈ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಪ್ರಸ್ತುತ ಸುಮಾರು 7 ಕೋಟಿ ರೈತರು ಕೆಸಿಸಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಒಬ್ಬ ರೈತ, ಪಿಂಚಣಿ ಯೋಜನೆಯ ಫಲಾನುಭವಿ ಕೂಡ ಆಗಬಹುದಾಗಿದೆ‌.

ಪಿಎಂ ಕಿಸಾನ್ ಮಾನ್ ಧನ್ ಯೋಜನೆಯೆಂಬುದನ್ನು ಸರ್ಕಾರ ರೈತರಿಗೆ ನೀಡುತ್ತಿದೆ. ಈ ಯೋಜನೆ ಫಲಾನುಭವಿ ಆಗಲು ಯಾವುದೇ ರೀತಿಯ ದಾಖಲೆ ನೀಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ನೀವು 18ನೇ ವಯಸ್ಸಿನಲ್ಲಿ ಸೇರಿದರೆ, ಮಾಸಿಕ 55 ರೂ. ಅಥವಾ 660 ರೂಪಾಯಿ‌ ಇದೆ. ನೀವು 40 ನೇ ವಯಸ್ಸಿನಲ್ಲಿ ಸೇರಿದರೆ ನೀವು ತಿಂಗಳಿಗೆ 200 ರೂಪಾಯಿ ಅಥವಾ ವಾರ್ಷಿಕವಾಗಿ 2400 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಹೀಗೆ ಹಲವು ಲಾಭಗಳನ್ನು ರೈತರಿಗಾಗಿ ಸರ್ಕಾರ ನೀಡುತ್ತಿದೆ.

 

Share Post

Leave a Reply

Your email address will not be published. Required fields are marked *

error: Content is protected !!