ಇಂದು 196 ಮಂದಿಯಲ್ಲಿ ಪಾಸಿಟಿವ್..! 1,939ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದ 196 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ.

ಇಂದು ಯಾದಗಿರಿ ರಾಜ್ಯಕ್ಕೆ ಭಾರೀ ಶಾಕ್ ನೀಡಿದ್ದು, ಬರೊಬಬ್ಬರಿ 72 ಮಂದಿಯಲ್ಲಿ ಸೋಂಕು ದೃಢವಾಗಿದೆ. ಇನ್ನು, ರಾಯಚೂರಿನಲ್ಲಿ 39, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 20 ಪಾಸಿಟಿವ್ ಕೇಸ್​ಗಳು ಬಂದಿವೆ. ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಆಗಮಿಸಿದ್ದು, ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು.

ಇಂದು ಒಬ್ಬರು ಮಾತ್ರ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡಗುಡೆಯಾಗಿದ್ದು, ಒಟ್ಟಾರೆಯಾಗಿ 598 ಮಂದಿಯನ್ನ ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಕೊರೊನಾದಿಂದ ಒಬ್ಬರು ಹಾಗೂ ಕೊರೊನಾ ಅಲ್ಲದ ಕಾರಣದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದ್ರೆ, ಇಬ್ಬರು ಕೊರೊನಾ ಸೋಂಕಿತರು, ಕೊರೊನಾವಲ್ಲದ ಕಾರಣದಿಂದ ಮೃತಪಟ್ಟಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!