ಕೊರೊನಾ ನಂತ್ರ ಕ್ರಿಕೆಟ್ ಶುರು ಮಾಡಲು ಐಸಿಸಿ ಮಾರ್ಗಸೂಚಿ ಸಿದ್ಧ

ಕೊರೊನಾ ವೈರಸ್ ನಂತರ ಕ್ರಿಕೆಟ್ ಪುನರಾರಂಭಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಂಪೂರ್ಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಐಸಿಸಿ ಮಾರ್ಗಸೂಚಿಯಲ್ಲಿ ದೇಶೀಯ ಕ್ರಿಕೆಟಿಗರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ತರಬೇತಿ, ಕ್ರೀಡೆ, ಪ್ರಯಾಣ ಮತ್ತು ವೈರಸ್ ರಕ್ಷಣೆ ಸೇರಿದೆ. ಐಸಿಸಿ ಈ ಮಾರ್ಗಸೂಚಿಯನ್ನು 4 ಭಾಗಗಳಾಗಿ ವಿಂಗಡಿಸಿದೆ.

ಮೊದಲ ಸುತ್ತಿನಲ್ಲಿ ಆಟಗಾರರು ಮಾತ್ರ ತರಬೇತಿಯನ್ನು ಪ್ರಾರಂಭಿಸಬೇಕು. ಇದರ ನಂತರ ಎರಡನೇ ಸುತ್ತಿನಲ್ಲಿ 3 ಆಟಗಾರರ ಗುಂಪು ತರಬೇತಿಯನ್ನು ಪ್ರಾರಂಭಿಸುತ್ತದೆ. ಮೂರನೇ ಸುತ್ತಿನಲ್ಲಿ ಸಣ್ಣ ಗುಂಪುಗಳು ಅಥವಾ ತಂಡಗಳು ತಮ್ಮ ತರಬೇತುದಾರರೊಂದಿಗೆ ತರಬೇತಿ ಪಡೆಯಲು ಸಾಧ್ಯವಾಗುತ್ತದೆ. ನಾಲ್ಕನೇ ಸುತ್ತಿನಲ್ಲಿ ತಂಡಗಳು ತಮ್ಮ ಸಂಪೂರ್ಣ ತಂಡದೊಂದಿಗೆ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ.

ಎಲ್ಲಾ ಅಂತರರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಲು ಮುಖ್ಯ ವೈದ್ಯಕೀಯ ಅಧಿಕಾರಿಯನ್ನು ನೇಮಿಸಲು ಐಸಿಸಿ ಮಾರ್ಗಸೂಚಿಯಲ್ಲಿ ಹೇಳಿದೆ. ಐಸಿಸಿ, ತಂಡಗಳಿಗೆ ಪ್ರತ್ಯೇಕ ತರಬೇತಿ ನೀಡುವಂತೆ ಹೇಳಿದೆ. ಇದಲ್ಲದೆ ಎಲ್ಲಾ ಆಟಗಾರರು ಕೋವಿಡ್ 19 ಟೆಸ್ಟ್ ನಡೆಸುವುದು ಕಡ್ಡಾಯವಾಗಲಿದೆ. ಕೋವಿಡ್ -19 ರ ರೋಗಲಕ್ಷಣಗಳನ್ನು ವರದಿ ಮಾಡುವ ಪ್ರಕ್ರಿಯೆಯನ್ನು ಆಟಗಾರರಿಗೆ ಕಲಿಸಬೇಕು. ವೈದ್ಯಕೀಯ ಕೋಣೆಯಲ್ಲಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಬೇಕೆಂದಿದೆ. ಪ್ರಯಾಣದ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

 

Share Post

Leave a Reply

Your email address will not be published. Required fields are marked *

error: Content is protected !!