ದಾವಣಗೆರೆಯಲ್ಲಿ ವೃದ್ಧೆ ಸೇರಿ ಮೂವರಿಗೆ ಕೋವಿಡ್-19 ದೃಢ

ದಾವಣಗೆರೆ: ಜಿಲ್ಲೆಯಲ್ಲಿ ವೃದ್ಧೆ ಸೇರಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ಶನಿವಾರ ಬಂದ ವೈದ್ಯಕೀಯ ವರದಿ ಖಚಿತಪಡಿಸಿದೆ. ಜಾಲಿನಗರದ 48 ವರ್ಷದ ಸೋಂಕಿತ ವ್ಯಕ್ತಿಯ (ಪಿ.1251) ಸಂಪರ್ಕದಿಂದ 42 ವರ್ಷದ ಪುರುಷ (ಪಿ.1808), 69 ವರ್ಷದ ವೃದ್ಧೆ (ಪಿ.1809) ಹಾಗೂ 45 ವರ್ಷದ ಪುರುಷನಿಗೆ (ಪಿ.1852) ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣದ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 21 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್‌ನಿಂದ ನಾಲ್ವರು ಮೃತಪಟ್ಟಿದ್ದಾರೆ. 96 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

Share Post

Leave a Reply

Your email address will not be published. Required fields are marked *

error: Content is protected !!