Monday, January 25, 2021
Home ಕ್ರಿಕೆಟ್ ಕ್ರೀಡೆ 4 ಗ್ರ್ಯಾಂಡ್ ಸ್ಲಾಮ್ ವಿಜೇತ ಆಯಶ್ಲೆ ಕೂಪರ್ ವಿಧಿವಶ

ಇದೀಗ ಬಂದ ಸುದ್ದಿ

4 ಗ್ರ್ಯಾಂಡ್ ಸ್ಲಾಮ್ ವಿಜೇತ ಆಯಶ್ಲೆ ಕೂಪರ್ ವಿಧಿವಶ

ಬ್ರಿಸ್ಬೇನ್,ಮೇ.23: ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು 1958ರಲ್ಲಿ ಯುಎಸ್ ಚಾಂಪಿಯನ್ ಷಿಪ್ ಸೇರಿದಂತೆ ಒಟ್ಟು ನಾಲ್ಕು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಕಿರೀಟ ಜಯಿಸಿದ್ದ ಆಯಶ್ಲೆ ಕೂಪರ್ (83) ನಿಧನರಾಗಿದ್ದಾರೆ .

ದೀರ್ಘ ಕಾಲದ ಅನಾರೋಗ್ಯದ ಕಾರಣ ಮಾಜಿ ಮೊದಲ ಶ್ರೇಯಾಂಕದ ಹಾಗು ದೀರ್ಘಕಾಲದ ಆಡಳಿತಗಾರ ಆಯಶ್ಲೇ ಕೂಪರ್ ನಿಧನರಾಗಿದ್ದಾರೆ ಎಂದು ಟೆನಿಸ್ ಆಸ್ಟ್ರೇಲಿಯಾ ತಿಳಿಸಿದೆ.

ಕೂಪರ್ ನೇತೃತ್ವದ ಆಸ್ಟ್ರೇಲಿಯಾ ಡೇವಿಸ್ ಕಪ್ ತಂಡ 1957ರಲ್ಲಿ ಅಮೆರಿಕಾ ವಿರುದ್ಧ ಗೆದ್ದು ಪ್ರಶಸ್ತಿ ಉಳಿಸಿಕೊಂಡಿತ್ತು. ಆದರೆ ಮರುವರ್ಷ ಆಸ್ಟ್ರೇಲಿಯಾ ತಂಡ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಕೂಪರ್ ತೀವ್ರ ಬೇಸರಗೊಂಡಿದ್ದರೆಂದು ಟೆನಿಸ್ ಆಸ್ಟ್ರೇಲಿಯಾ ಹೇಳಿದೆ.

TRENDING