ಅಮೆಜಾನ್ ಇಂಡಿಯಾದಿಂದ 50 ಸಾವಿರ ತಾತ್ಕಾಲಿಕ ಉದ್ಯೋಗ ಸೃಷ್ಟಿ

ಬೆಂಗಳೂರು,ಮೇ.23  : ಅಮೆಜಾನ್ ಇಂಡಿಯಾ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಠಿಸುವುದಾಗಿ ಅಮೆಜಾನ್ ತಿಳಿಸಿದೆ.

ಅಮೆಜಾನ್ ಕಂಪನಿಯಡಿ ಸ್ವತಂತ್ರ ಗುತ್ತಿಗೆದಾರರಾಗಿ ಪಾರ್ಟ್ ಟೈಂ ಕೆಲಸ ಸೇರಿದಂತೆ ಡೆಲಿವರಿ ನೆಟ್ ವರ್ಕ್ ಹಾಗು ಅವರ ಅವಲಂಬಿತ ಕೇಂದ್ರಗಳಲ್ಲಿ ಇದು ನಾನಾ ರೀತಿಯ ಪಾತ್ರಗಳನ್ನು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ಅಮೆಜಾನ್ ಇಂಡಿಯಾ ತಿಳಿಸಿದೆ.
ಈ ಉದ್ಯೋಗಿಗಳು ಇತರೆ ಸಾವಿರಾರು ಸಹವರ್ತಿಗಳನ್ನು ಸೇರಲಿದ್ದು, ಸರಕುಗಳನ್ನು ಪ್ಯಾಕ್ ಮಾಡುವ, ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ದಕ್ಷತೆಯಿಂದ ಮಾಡಲಿದ್ದಾರೆ ಎಂದು ಹೇಳಿದೆ. ಸಣ್ಣ ವ್ಯವಹಾರ ಹಾಗು ಆರ್ಥಿಕತೆಯಲ್ಲಿ ಅಮೆಜಾನ್ ಮತ್ತು ಇ- ಕಾಮರ್ಸ್ ಹೇಗೆ ನಮ್ಮ ಗ್ರಾಹಕರಿಗಾಗಿ ಹೇಗೆ ವ್ಯವಹಾರ ಮಾಡಬಹುದು ಎಂಬುದನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಲಿತುಕೊಂಡಿರುವುದಾಗಿ ಅಮೆಜಾನ್ ಉಪಾಧ್ಯಕ್ಷ ಅಕಿಲ್ ಸಕ್ಸೇನಾ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!