Wednesday, January 27, 2021
Home ಸುದ್ದಿ ಜಾಲ ಪತ್ನಿಯ ಜೊತೆ ಮಾಸ್ಕ್ ಧರಿಸಿ ಆಸ್ಪತ್ರೆಗೆ ಭೇಟಿ ಕೊಟ್ಟ ಕಾಲಿವುಡ್ ನಟ ‘ಅಜಿತ್’

ಇದೀಗ ಬಂದ ಸುದ್ದಿ

ಪತ್ನಿಯ ಜೊತೆ ಮಾಸ್ಕ್ ಧರಿಸಿ ಆಸ್ಪತ್ರೆಗೆ ಭೇಟಿ ಕೊಟ್ಟ ಕಾಲಿವುಡ್ ನಟ ‘ಅಜಿತ್’

ಚೆನ್ನೈ,ಮೇ.23: ಕೊರೊನಾ ವೈರಸ್ ಸೋಂಕಿನ ನಡುವೆಯೇ ಕಾಲಿವುಡ್ ನಟ ಅಜಿತ್ ಹಾಗು ಪತ್ನಿ ಶಾಲಿನಿ ಇಬ್ಬರೂ ಮಾಸ್ಕ್ ಧರಿಸಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನೀಲಿ ಬಣ್ಣದ ಶರ್ಟ್ ಧರಿಸಿದ್ದ ಅಜಿತ್ ಅವರು ಪತ್ನಿ ಶಾಲಿನಿ ಜೊತೆಗೆ ಆಸ್ಪತ್ರೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಜಿತ್ ಅವರು ಆಸ್ಪತ್ರೆಗೆ ಯಾವ ಕಾರಣಕ್ಕೆ ಭೇಟಿ ನೀಡಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ, ಅಜಿತ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

TRENDING