Monday, January 25, 2021
Home ಸುದ್ದಿ ಜಾಲ 24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು

ಇದೀಗ ಬಂದ ಸುದ್ದಿ

24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು

ದೆಹಲಿ, : ಭಾರತದಲ್ಲಿ ನಿನ್ನೆ ಒಂದೇ ದಿನ 6654 ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,25,101ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 137 ಜನರು ಮೃತಪಟ್ಟಿದ್ದು, ಇದುವರೆಗೂ ಭಾರತದಲ್ಲಿ 3720 ಜನರು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು 51,784 ಜನರು ಕೊವಿಡ್ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 69597 ಜನರು ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ದಿನದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದ್ದು, ಸುಮಾರು 25 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದೆ.

ಮೇ 3ರ ನಂತರ ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿ ಮಾಡಲಾಯಿತು. ಇದರಲ್ಲಿ ಅನೇಕ ಸಡಿಲಿಕೆ ಘೋಷಣೆ ಮಾಡಲಾಯಿತು. ವಿದೇಶಿ, ಹೊರರಾಜ್ಯ, ಹೊರ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದವರಿಗೆ ತಮ್ಮ ತಮ್ಮ ಸ್ವಗ್ರಾಮಗಳಿಗೆ ಹೋಗಲು ಅನುಮತಿ ನೀಡಿದರು. ಇದು ಸಹಜವಾಗಿ ಪ್ರಕರಣ ಹೆಚ್ಚಾಗಲು ಕಾರಣವಾಯಿತೇ ಎಂಬ ಚರ್ಚೆ ನಡೆಯುತ್ತಿದೆ. ಅತಿ ಹೆಚ್ಚು ಕೊರೊನಾ ವೈರಸ್‌ ಸೋಂಕು ಹೊಂದಿರುವ ರಾಷ್ಟ್ರಗಳ ಪೈಕಿ ಜಗತ್ತಿನಲ್ಲಿ ಭಾರತದ 13ನೇ ಸ್ಥಾನದಲ್ಲಿದೆ. ಆದರೆ, ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಯುಎಸ್, ಬ್ರೆಜಿಲ್, ರಷ್ಯಾ ನಂತರ ಭಾರತದಲ್ಲಿ ಪ್ರತಿದಿನ ಹೆಚ್ಚು ಕೇಸ್ ವರದಿಯಾಗುತ್ತಿದೆ.

TRENDING