ವಾರಂಗಲ್,: ತೆಲಂಗಾಣದ ವಾರಂಗಲ್ ಜಿಲ್ಲೆಯ ಬಾವಿಯೊಂದರಲ್ಲಿ 9 ಮಂದಿಯ ಶವ ಪತ್ತೆಯಾಗಿದೆ.ಮೃತರು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದ್ದು, 9 ಮಂದಿ ಒಂದೇ ಕುಟುಂಬದವರಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಕಳೆದ 20 ವರ್ಷಗಳಿಂದ ಕುಟುಂಬ ಗೀಸಿಕೊಂಡ ಮಂಡಲದ ಗೊರೆಕುಂಟ ಪ್ರದೇಶದಲ್ಲಿ ವಾಸವಿದ್ದರು. ಅವರೆಲ್ಲರೂ ಸೆಣಬಿನ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಘೋಷಣೆಯಾದ ಬಳಿಕ ಮಿಲ್ನಲ್ಲಿರುವ ಕೊಠಡಿಯೊಂದರಲ್ಲಿ ಇವರು ವಾಸಿಸುತ್ತಿದ್ದರು. ನಾಲ್ಕು ಶವ ಗುರುವಾರ ಪತ್ತೆಯಾಗಿತ್ತು, ಇಬ್ಬರು ಮಹಿಳೆಯರು ಸೇರಿ ಮೂರು ಮಂದಿಯ ಶವ ಇಂದು ಪತ್ತೆಯಾಗಿದೆ. ಅವರ ಸಾವಿಗೆ ಆರ್ಥಿಕ ಸಂಕಷ್ಟವೇ ಕಾರಣ, ಅದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.