ಕೇಂದ್ರದಿಂದ ಪ.ಬಂಗಾಳಕ್ಕೆ ತುರ್ತಾಗಿ 1 ಸಾವಿರ ಕೋಟಿ ಪರಿಹಾರ: ಪ್ರಧಾನಿ ಮೋದಿ

ಕೋಲ್ಕತ್ತಾ: ಅಂಫಾನ್ ಚಂಡಮಾರುತದಿಂದ ಹಾನಿಗೀಡಾದ ಪಶ್ಚಿಮಬಂಗಾಳದ ಕೆಲ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ 1 ಸಾವಿರ ಕೋಟಿ ರೂಪಾಯಿಗಳ ತುರ್ತು ಪರಿಹಾರ ಘೋಷಿಸಿದ್ದಾರೆ. ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕ್ಲೋನ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಕೇಂದ್ರ ನೀಡಲಿದೆ. ಅಂಫಾನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರೊಂದಿಗೆ ಕೇಂದ್ರ ಹಾಗೂ ಬಂಗಾಳ ಸರ್ಕಾರವಿದೆ ಎಂದು ಅಭಯ ನೀಡಿದ್ದಾರೆ.ಕಳೆದ ವರ್ಷದ ಮೇ ತಿಂಗಳಿನಲ್ಲಿ ದೇಶ ಚುನಾವಣೆಯಲ್ಲಿ ತಲ್ಲೀನವಾಗಿತ್ತು. ಅದೇ ಸಮಯದಲ್ಲಿ ಒಡಿಶಾದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಕಾರ್ಯಾಚರಣೆಯಲ್ಲಿ ನಿರತರಾಗಿದ್ದೆವು. ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಭಾರಿ ಅವಾಂತರವನ್ನೇ ಸೃಷ್ಟಿಸಿದೆ ಎಂದು ಪ್ರಧಾನಿ ಕಂಬನಿ ಮಿಡಿದಿದ್ದಾರೆ.ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಮೋದಿ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಾಥ್​ ನೀಡಿದ್ರು

Share Post

Leave a Reply

Your email address will not be published. Required fields are marked *

error: Content is protected !!