ವಂದೇ ಭಾರತ್ ಮಿಷನ್ ನಡಿ ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ 177 ಕನ್ನಡಿಗರು

ಲಾಕ್ ಡೌನ್ ನಿಂದಾಗಿ ವಿದೇಶದಲ್ಲಿರುವ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಕೈಗೆತ್ತಿಕೊಂಡಿದೆ.ಇದರ ಅನ್ವಯ ವಿದೇಶಗಳಿಂದ ಅನಿವಾಸಿ ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ..

ಇನ್ನೂ ಇದೇ ರೀತಿ ಕತಾರ್ ನ ಧೋಹಾ ದಲ್ಲಿ ಸಿಲುಕಿರುವ 177 ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರಲು ವಂದೇ ಭಾರತ್ ವಿಮಾನದಲ್ಲಿ ಎಲ್ಲ ಬಗೆಯ ವ್ಯವಸ್ಥೆ ಮಾಡಿದ್ದು. ವಿಮಾನ ಇಂದು ಮಧ್ಯಾಹ್ನ 1.30 ಕ್ಕೇ ಹಮದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ್ಟಿದ್ದು,ಇಂದು ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ .

ಕತಾರ್ ನ ಧೋಹ ದಿಂದ ಹೊರಟಿರುವ ಪ್ರಯಾಣಿಕರ ಪಟ್ಟಿಯನ್ನು ಭಾರತದ ರಾಯಭಾರಿ ಕಚೇರಿಯಿಂದ ಸಿದ್ಧಪಡಿಸಲಾಗಿದೆ .. ಇನ್ನೂ ವಿಮಾನದಲ್ಲಿ ಗರ್ಭಿಣಿಯರು, ವಯಸ್ಸಾದ ಜನರು, ಮಕ್ಕಳು, ವೈದ್ಯಕೀಯ ಸಮಸ್ಯೆಗಳಿರುವ ಜನರಿಗೆ ಮೊದಲ ಆದ್ಯತೆ ನೀಡಲಾಗಿದ್ದು. ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸದಾನಂದಗೌಡರ ಸಹಕಾರಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

 

 

 

Share Post

Leave a Reply

Your email address will not be published. Required fields are marked *

error: Content is protected !!