Wednesday, January 27, 2021
Home ಜಿಲ್ಲೆ ಬೆಂಗಳೂರು 4000 ಸಾವಿರ ಚಾಲಕರಿಗೆ ಆಹಾರ ಕಿಟ್ ಗಳನ್ನ ವಿತರಿಸಿದ ಸಚಿವ ಕೆ ಗೋಪಾಲಯ್ಯನವರು

ಇದೀಗ ಬಂದ ಸುದ್ದಿ

4000 ಸಾವಿರ ಚಾಲಕರಿಗೆ ಆಹಾರ ಕಿಟ್ ಗಳನ್ನ ವಿತರಿಸಿದ ಸಚಿವ ಕೆ ಗೋಪಾಲಯ್ಯನವರು

ಬೆಂಗಳೂರು 22- ನಮ್ಮ ಸರ್ಕಾರವಿರುವುದು ಬಡವರಿಗೆ ಹಾಗೂ ನಿಮಗೊಸ್ಕರ. ಯಾವುದೇ ಸಂದರ್ಭದಲ್ಲೂ ನಾವು ಚಾಲಕರ ಕೈ  ಬಿಡುವಮಾತಿಲ್ಲ. ನಿಮ್ಮ ಜೊತೆಗೆ ನಾವು ಯಾವಾಗಲೂ ಇರ್ತೀವಿ ಎಂದು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯನವರು ಹೇಳಿದ್ರು.

 

ಇಂದು ಸಚಿವ ಕೆ. ಗೋಪಾಲಯ್ಯನವರು, ಮಹಾಲಕ್ಷ್ಮಿ ವಿಧಾನ ಸಭಾ ಕ್ಷೇತ್ರದ, ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ, 4000 ಸಾವಿರ ಆಟೋ, ಲಾರಿ, ಟೆಂಪೋ, ಮತ್ತು ಬಸ್  ಚಾಲಕರಿಗೆ ಆಹಾರ ಕಿಟ್ ಗಳನ್ನ ವಿತರಿಸಿ ಮಾತನಾಡಿದ ಅವರು ಇವತ್ತು ನಮ್ಮ ಕ್ಷೇತ್ರದ ಎಲ್ಲಾ ಚಾಲಕರಿಗೆ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ. ಇನ್ನು ಯಾರ ಹೆಸರು ಇದರಲ್ಲಿ ಬಿಟ್ಟೋಗಿದೆ ಅವರ ಹೆಸರುಗಳನ್ನ ಬರೆಸುತ್ತಿದ್ದೀನಿ. ಅವರಿಗೆ ನನ್ನ ಕಚೇರಿಯಲ್ಲಿ ಕಿಟ್ ಗಳನ್ನ ಕೊಡೋದಾಗಿ ಹೇಳಿದರು.

 

ಇನ್ನು  ನಮ್ಮ ಸರ್ಕಾರ ಬಂದಮೇಲೆ ಸಾಕಷ್ಟು ಸುಧಾರಣೆಗಳು ಆಗಿವೆ. ಕೊರೋನ ವೈರಸ್ ತಡೆಯುವುದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ನಮ್ಮ ರಾಜ್ಯದ ನಾಯಕರಾದ ಯಡಯುರಪ್ಪ ಅವರು ದಿಟ್ಟವಾದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ಹಾಗೇ ಕೊರೋನ ವಿಚಾರದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳ ಬೇಕೆಂದರು ಆರ್ ಅಶೋಕ್ ರವರು ಉಪಾಧ್ಯಕ್ಷರಾಗಿದ್ದು, ಇಡೀ ರಾಜ್ಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳ ಬೇಕಾದರೆ ಇವರ ನಾಯಕತ್ವದಲ್ಲೂ ತೆಗೆದುಕೊಳ್ಳಲಾಗುತ್ತೆ. ಆರ್ ಅಶೋಕ್ ಈ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಖುಷಿಯಾಗಿದೆ.

 

ಆಟೋ ಚಾಲಕರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸುತ್ತಿದ್ದು ಅವರಿಗೆ 5000 ಸಾವಿರ ಪರಿಹಾರ ಹಣ ಘೋಷಣೆ ಮಾಡಿದೆ.. ಆಟೋ ಚಾಲಕರು ಹಣ ಪಡೆಯೋದಕ್ಕೆ ಅಗತ್ಯ ದಾಖಲೆಗಳನ್ನು ಕೊಡಬೇಕು ಅದನ್ನು ನನ್ನ ಕಚೇರಿನಲ್ಲೆ ಪ್ರಾರಂಭಿಸಲಾಗುವುದು ಎಂದರು.

 

ಇನ್ನು ಬಡ ವಲಸೆ ಕಾರ್ಮಿಕರಿಗೆ ಆಹಾರದ ಕೊರತೆಯಾಗಬಾರದೆಂದು ನಮ್ಮ ಸರ್ಕಾರ ಯಾರ ಬಳಿ   ರೇಷನ್ ಕಾರ್ಡ್ ಇಲ್ಲ ಅವರಿಗೆ ಉಚಿತ ಆಹಾರ ಧಾನ್ಯಗಳನ್ನ ಕೊಡಬೇಕು ಅನ್ನೋ ನಿರ್ಧಾರವನ್ನು ಮಾಡಿದೆ. ನೀವು ನಿಮ್ಮ ಆಧಾರ್ ಕಾರ್ಡ್ ತೋರಿಸಿ ನ್ಯಾಯಲಬೆಲೆ ಅಂಗಡಿಗಳಲ್ಲಿ 26 ರಿಂದ ರೇಷನ್ ಪಡೆಯಬಹುದು. ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ  5ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಮುಂದಿನ ತಿಂಗಳು ಜೂನ್ 1 ರಿಂದ ದಿನಾಂಕ 10 ರವರೆಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ. ನಿಮ್ಮಗಳ ಜೊತೆ ನಾವು ಮತ್ತು ನಮ್ಮ ಸರ್ಕಾರ ಇರುತ್ತೆ. ಯಾರು ಹೆದರ ಬೇಕಿಲ್ಲ ಎಂದು ತಿಳಿಸಿದರು.

 

ಇನ್ನು ಈ ವೇಳೆ ಮಾತನಾಡಿದ್ದ ಸಚಿವ ಆರ್ ಅಶೋಕ್, ಇಡೀ  ದೇಶ  ಇವತ್ತು ಒಟ್ಟಾಗಿ ಕೊರೋನ ಮಹಾಮಾರಿಯನ್ನ ದೇಶದಿಂದ ಹೊರಗಾಕಬೇಕೆಂದು ನಿರಂತರವಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ನಾವೆಲ್ಲರು ಈ ಸಂದರ್ಭದಲ್ಲಿ ವೈದ್ಯರಿಗೆ, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಜೊತೆಗೆ ಮಾಧ್ಯಮದವರಿಗೆ  ಧನ್ಯವಾದಗಳನ್ನು ಅರ್ಪಿಸಬೇಕು. ಕೊರೋನ ಬಂತಂದ್ರೆ ಎಲ್ಲಾರು ನಮ್ಮನ್ನ ಹೊರಹಾಕುತ್ತಾರೆ. ದರೆ ಇವರು ಧೈರ್ಯದಿಂದ ಇವರುಗಳು ಕೆಲಸ ಮಾಡ್ತಿದ್ದಾರೆ. ಕೊರೋನ ರೋಗಿಗಳು ಇದ್ದಲ್ಲೇ  ಹೋಗಿ ಆಶಾ ಕಾರ್ಯಕರ್ತೆಯರು ಔಷದಿಗಳನ್ನ ಕೊಡ್ತಿದ್ದಾರೆ ಎಂದು ತಿಳಿಸಿದರು.

 

ಇನ್ನು ನಾವು ಬೇರೆ ದೇಶಗಳನ್ನ ನೋಡುದ್ರೆ, ನಮ್ಮ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಬೇರೆ ದೇಶದಲ್ಲಿ ಜನ ಸಾಯೋಕೆ ಮುಂಚೆನೆ ಗುಂಡಿಗಳನ್ನ ತೋಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ನಮ್ಮ ಪ್ರಧಾನಿ ಜನರ ಪ್ರಾಣಗಳನ್ನ ಕಾಪಾಡಬೇಕಂತ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಇವತ್ತು ಕರ್ನಾಟಕದಲ್ಲಿ ಕೊರೋನ ಸಾಕಷ್ಟು ನಿಯಂತ್ರಣವಾಗಿದ್ದು ಅದಕ್ಕೆ ನಮ್ಮ ನಾಯಕರಾದ ಯಡಿಯುರಪ್ಪನವರೆ ಕಾರಣ ಎಂದು ಹೇಳಿದರು.

 

ಇನ್ನು ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರುಗಳಾದ ಮುನಿರಾಜು , ನರೇಂದ್ರಬಾಬು, ಮಾಜಿ ಉಪಮೇಯರ್ ಎಸ್ ಹರೀಶ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಕ್ಷೇತ್ರದ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆ ಉಪಾದ್ಯಕ್ಷರು ಜಯರಾಮಯ್ಯ, ಮುಖಂಡರುಗಳಾದ ಶ್ರೀನಿವಾಸ್,  ನಿಸರ್ಗ ಜಗದೀಶ್, ಮುಂತಾದವರು ಪಾಲ್ಗೊಂಡಿದ್ರು.

TRENDING