Wednesday, January 27, 2021
Home ಸುದ್ದಿ ಜಾಲ ಉಚಿತವಾಗಿ ದಿನಸಿ ಕಿಟ್ ವಿತರಣೆ

ಇದೀಗ ಬಂದ ಸುದ್ದಿ

ಉಚಿತವಾಗಿ ದಿನಸಿ ಕಿಟ್ ವಿತರಣೆ

ಚಡಚಣ: ತಾಲೂಕಿನ ಕೇರೂರ ಗ್ರಾಮದ 30 ಬಡ ಕುಟುಂಬಗಳಿಗೆ ದಿನಸಿ ಕಿಟಗಳನ್ನು ಸ್ವ ಖರ್ಚಿನಲ್ಲಿ ಗ್ರಾಮದ ಯುವ ಮುಖಂಡ ಶ್ರೀಶೈಲ್ ಶರಣಪ್ಪ ಭೈರಗೊಂಡ’ರವರು ವಿತರಿಸಿದರು… ಸದಾ ಬಡವರ ಸೇವೆ ಮಾಡುತ್ತಿರುವ ಗ್ರಾಮದ ‘ಶ್ರೀಶೈಲ್ ಶರಣಪ್ಪ ಭೈರಗೊಂಡ’ ಅವರು ಕೊರೋನಾ ಲಾಕ್ ಡೌನ್ ನಿಂದ ಗ್ರಾಮದ ಬಡವರು ಹಸಿವಿನಿಂದ ಇರಬಾರದು. ತಮ್ಮಿಂದ ಸಾದ್ಯವಾದಷ್ಟು ಬಡವರಿಗೆ ತಿನ್ನಲು ಆಹಾರ ಕಿಟ್ ನೀಡಬೇಕೆಂಬ ಹಂಬಲದಿಂದ ಇಂದು ತಮ್ಮ ಸ್ವ ಖರ್ಚಿನಲ್ಲಿ ಅಕ್ಕಿ, ಬೆಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಒಳಗೊಂಡ ಆಹಾರ ಕಿಟ್ 30 ಬಡ ಕುಟುಂಬಗಳಿಗೆ ವಿತರಣೆ ಮಾಡಿದರು…ಈ ಸಂದರ್ಭದಲ್ಲಿ ಗ್ರಾಮದ ಅಪ್ಪಾಸಾಹೇಬ್ ಭೈರಗೊಂಡ, ಪಿಂಟು ಸಾಹುಕಾರ ಭೈರಗೊಂಡ, ಸಿದ್ದರಾಮ ಭೈರಗೊಂಡ, ಸಿದ್ದಾರಾಮ ಜತ್ತಿ, ಬಸವರಾಜ ವಾಗಮೋರೆ,  ಮಂಜುನಾಥ ವಾಗಮೊರೆ, ಹಣಮಂತ ವಾಗಮೋರ ಹಾಗೂ ಗ್ರಾಮದ ಲಕ್ಷ್ಮೀ ಗಜಾನನ ಕಮೀಟಿಯ ಎಲ್ಲ ಸದಸ್ಯರು ಹಾಜರಿದ್ದರು…

 

TRENDING