ನವದೆಹಲಿ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸ್ತಿದ್ದಾರೆ. ರೆಪೋ ದರ ಕಡಿತ, ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದ್ದಾರೆ. ಈ ಮೂಲಕ ಸಾಲ ಪಡೆಯುವವರಿಗೆ
- 40 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ ಮಾಡಿದ ಆರ್ಬಿಐ
- ಶೇಕಡಾ4ರಷ್ಟಿದ್ದ ರೆಪೋ ದರ ಶೇ.4ಕ್ಕೆ ಇಳಿಕೆ
- ರಿವರ್ಸ್ ರೆಪೋ ದರ ಶೇಕಡಾ35ಕ್ಕೆ ಇಳಿಕೆ
- ಈ ಮೊದಲು ರಿವರ್ಸ್ ರೆಪೋ ದರ75ರಷ್ಟಿತ್ತು
- ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಕಡಿತ
- ರಿವರ್ಸ್ ರೆಪೋ ದರ ಕಡಿತದಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ
- ಬ್ಯಾಂಕುಗಳಿಗೆ ನೀಡುವ ಹಣದ ಮೇಲಿನ ಬಡ್ಡಿ ದರದಲ್ಲೂ ಇಳಿಕೆ
- ರಿಸರ್ವ್ ಬ್ಯಾಂಕ್ನಲ್ಲಿ ಇಟ್ಟಿರುವ ಹಣವನ್ನು ವಾಪಸ್ ಪಡೆಯಲಿದೆ
- ಹಣವನ್ನು ವಾಪಸ್ ಗ್ರಾಹಕರಿಗೆ ಸಾಲವಾಗಿ ನೀಡಲಿದೆ
- ಪ್ರಮುಖ ಕೈಗಾರಿಗಾ ಉತ್ಪಾದನೆ ಶೇಕಡಾ 17ರಷ್ಟು ಕಡಿಮೆಯಾಗಿದೆ
- ಲಾಕ್ಡೌನ್ ಸಂದರ್ಭದಲ್ಲಿ ಬೇಡಿಕೆ ಹಾಗೂ ಪೂರೈಕೆ ಕುಸಿದಿದೆ
- ಮಾರ್ಚ್ ತಿಂಗಳನಲ್ಲಿ ಸಿಮೆಂಟ್ ಉತ್ಪಾದನೆ ಶೇಕಡಾ 19ರಷ್ಟು ಕಡಿಮೆಯಾಗಿದೆ
- ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ.3.7ರಷ್ಟು ಹೆಚ್ಚಳವಾಗಿದೆ
- ಕೃಷಿ ವಲಯದಲ್ಲಿ ಹೊಸ ಆಶಾಕಿರಣ ಮೂಡಿದೆ
- ಬೇಳೆ ಕಾಳುಗಳ ಬೆಲೆ ಏರಿಕೆ ಆತಂಕ ಸೃಷ್ಟಿಸಿದೆ
- ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ರಫ್ತು ಕುಸಿದಿದೆ
- ದೇಶದಲ್ಲಿ ಶೇಕಡಾ 60ರಷ್ಟು ರಪ್ತು ಕುಸಿದಿದೆ
- ಆಮದು ಶೇಕಡಾ 58ರಷ್ಟು ಇಳಿಕೆ ಆಗಿದೆ
- ಗೃಹ ಬಳಕೆಯ ವಸ್ತುಗಳಲ್ಲಿ ಶೇ 33ರಷ್ಟು ಏರಿಕೆಯಾಗಿದೆ
- ಎರಡು ತಿಂಗಳಲ್ಲಿ ದೇಶದ ಆರ್ಥಿಕತೆಯ ಮೇಲೆ ಭಾರೀ ದುಷ್ಪರಿಣಾಮ
- ಭಾರತದಲ್ಲಿ ಆರ್ಥಿಕತೆ ಚೇತರಿಕೆಗೆ ಕ್ರಮ ಕೈಗೊಳ್ಳಲಾಗಿದೆ
- ದೇಶದಲ್ಲಿ ಉತ್ತಮ ಮಾನ್ಸೂನ್ ಮಳೆ ಆಗುವ ನಿರೀಕ್ಷೆಯಿದೆ
- ಹಣದುಬ್ಬರ ಅನಿಶ್ಚಿತತೆ ಮುಂದಿನ ದಿನಗಳಲ್ಲಿ ಕಾಡಲಿದೆ
- ವಿದೇಶಿ ವಿನಿಮಯ ಸಂಗ್ರಹ2 ಬಿಲಿಯನ್ ಏರಿಕೆ
- 2021ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ನಕಾರಾತ್ಮಕ ಆಗಲಿದೆ
- ಆರ್ಥಿಕ ಮಾರುಕಟ್ಟೆ ಚೈತನಕ್ಕೆ ಆರ್ಬಿಐ ಕ್ರಮ
- SIDBIಗೆ ಮುಂದಿನ ಮೂರು ತಿಂಗಳಲ್ಲಿ 15 ಸಾವಿರ ಕೋಟಿ
- EMI ಪಾವತಿದಾರರಿಗೆ ಮತ್ತೆ ರಿಲೀಫ್ ಕೊಟ್ಟ ಆರ್ಬಿಐ
- ಸಾಲದ ಮೇಲಿನ ಇಎಂಐ ಮತ್ತೆ ವಿಸ್ತರಣೆ
- ಆಗಸ್ಟ್ 31ರವರೆಗೂ ಇಎಂಐ ವಿಸ್ತರಣೆ