Monday, January 25, 2021
Home ಜಿಲ್ಲೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ: ಹೊರ ರಾಜ್ಯದಿಂದ ಬಂದಿದ್ದ ಮೂವರಿಗೆ ಕೋವಿಡ್-19 ದೃಢ

ಇದೀಗ ಬಂದ ಸುದ್ದಿ

ದೊಡ್ಡಬಳ್ಳಾಪುರ: ಹೊರ ರಾಜ್ಯದಿಂದ ಬಂದಿದ್ದ ಮೂವರಿಗೆ ಕೋವಿಡ್-19 ದೃಢ

ದೊಡ್ಡಬಳ್ಳಾಪುರ: ಮುಂಬೈಯಿಂದ ಬಾಗೇಪಲ್ಲಿ ಮೂಲಕ ಬಂದು ನಗರದ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿದ್ದ 6 ಜನರ ಪೈಕಿ 3 ಜನರಿಗೆ ಕೋವಿಡ್ -19 ದೃಢಪಟ್ಟಿದೆ. ಸೋಂಕು ದೃಢಪಟ್ಡಿರುವ ಮೂರು ಜನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಂಬೈನಲ್ಲಿ ಐದು ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ಮೇ 19ರಂದು ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಮೂರು ಜನರಲ್ಲಿ ಕೋವಿಡ್-19 ದೃಢಪಡುವ ಮೂಲಕ ಹೊರಗಿನಿಂದ ಬಂದವರ ಮೂಲಕ ಕೊರೊನಾ ವೈರಸ್ ಸೋಂಕು ನಗರಕ್ಕೆ ಆಗಮನವಾಗಿದೆ…

 

TRENDING