ಟ್ರಾಫಿಕ್ ಪೊಲೀಸ್ಗೆ ಸೋಂಕು… ಸಹೋದ್ಯೋಗಿಗಳು, ಕುಟುಂಬದವರು ಕ್ವಾರಂಟೈನ್

ಬೆಂಗಳೂರು: ಯಲಹಂಕ ಆರ್​​ಕೆ ಹೆಗಡೆ ನಗರ ನಿವಾಸಿ ಫ್ರೇಜರ್ ಟೌನ್ ಸಂಚಾರ ಪೊಲೀಸ್​ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಇವರು ಫ್ರೇಜರ್​ ಟೌನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ಜೊತೆ ಸಂಪರ್ಕ ಹೊಂದಿದ್ದ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಪ್ರಥಮ ಸಂಪರ್ಕದಲ್ಲಿದ್ದ ಅವರ ಕುಟುಂಬಸ್ಥರನ್ನು, ಠಾಣೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತಿದ್ದಾರೆ. ಇವರ ಮನೆ ಸಮೀಪದ ನೂರು ಮೀಟರ್ ಪ್ರದೇಶವನ್ನು ಕಂಟೈನ್​​ಮೆಂಟ್ ಝೋನ್​ ಎಂದು ಘೋಷಿಸಲಾಗಿದೆ. ಇವರಿಗೆ ಹೇಗೆ ಕೊರೊನಾ ತಗುಲಿತು ಎಂದು ಪತ್ತೆ ಹಚ್ಚಲಾಗುತ್ತಿದೆ. ಯಲಹಂಕ ವ್ಯಾಪ್ತಿಯಲ್ಲಿ ಕಂಡುಬಂದ ಎರಡನೇ ಕೊರೊನಾ ಪ್ರಕರಣ ಇದಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!