ಕೊರೊನಾ ವೈರಸ್ ಸೃಷ್ಟಿಸಿದ ಚೀನಾಗೆ ಒಂದು ಗತಿ ಕಾಣಿಸ್ತೀವಿ” : ಟ್ರಂಪ್ ಗುಡುಗು

ವಾಷಿಂಗ್ಟನ್, ;ವಿನಾಶಕಾರಿಕೊರೊನಾ ದಾಳಿಯಿಂದ ವಿಶ್ವದಲ್ಲೇಅತಿ ಹೆಚ್ಚು ಸಾವು ಮತ್ತು ಸೋಂಕಿನಿಂದ ತತ್ತರಿಸಿರುವ ಅಮೆರಿಕ, ಚೀನಾ ವಿರುದ್ಧ ಮತ್ತಷ್ಟು ಕೆಂಡಾಮಂಡಲವಾಗಿದೆ. ಡೆಡ್ಲಿಕೊರೊನಾ ವೈರಸ್ ಬಂದದ್ದುಚೀನಾದಿಂದಲೇ. ನಾವು ಇದನ್ನು ಹಗುರುವಾಗಿ ಪರಿಗಣಿಸುವುದಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್‍ಕಮ್ಯೂನಿಸ್ಟ್‍ದೇಶದ ವಿರುದ್ಧ ಪ್ರತೀಕಾರಖಚಿತಎಂಬುದನ್ನು ಪುನರುಚ್ಚರಿಸಿದ್ದಾರೆ. ಮಿಚಿಗನ್ ಪ್ರಾಂತ್ಯದಲ್ಲಿಅಫ್ರಿಕಾ ಮೂಲದಅಮೆರಿಕ ನಾಯಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಟ್ರಂಪ್‍ಚೀನಾಗೆ ಮತ್ತೊಮ್ಮೆಗಂಭೀರಎಚ್ಚಿರಿಕೆ ನೀಡಿದರು.ಕೋವಿಡ್-19 ವೈರಸ್ ಬಂದಿರುವುದುಚೀನಾದಿಂದಲೇ. ಇದರಲ್ಲಿಯಾವುದೇಅನುಮಾನಇಲ್ಲ.

ನಮಗೆ ಈ ಬಗ್ಗೆ ತುಂಬಾ ನೋವು ಮತ್ತುಯಾತನೆಯಾಗಿದೆ. ನಾವು ಈಗಷ್ಟೇ ವಾಣಿಜ್ಯಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಸಹಿ ಮಾಡಿದ ಶಾಯಿ ಇನ್ನುಒಣಗಿಲ್ಲ. ನಾವು ಇದನ್ನು ಹಗುರವಾಗಿ ಪರಿಗಣಿಸಿಲ್ಲ ಎಂದು ಹೇಳಿರುವ ಅಮೆರಿಕಅದ್ಯಕ್ಷರುಚೀನಾಗೆ ಒಂದು ಗತಿ ಕಾಣಿಸುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ಕೊರೊನಾ ವೈರಸ್ ಬಗ್ಗೆ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ವಿಶ್ವದ ದಿಕ್ಕು ತಪ್ಪಿಸಿರುತ್ತಿರುವ ಚೀನಾದ ಬಗ್ಗೆ ಟ್ರಂಪ್ ಮೊದಲಿನಿಂದಲೂ ಕೆಂಡಾಮಂಡಲವಾಗಿದ್ದು, ಈಗ ಮತ್ತಷ್ಟು ಕೆರಳಿಸಿದ್ದಾರೆ. ಇದುಕಮ್ಯೂನಿಸ್ಟ್‍ದೇಶದ ವಿರುದ್ಧಅಮೆರಿಕದ ಸ್ಪಷ್ಟ ಪ್ರತೀಕಾರಕ್ರಮದ ಮುನ್ನೆಚ್ಚರಿಕೆಯಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!