24 ಗಂಟೆಯಲ್ಲಿ ದಾಖಲೆಯ 6000ಕ್ಕೂ ಅಧಿಕ ಸೋಂಕಿತರು ಪತ್ತೆ; 3500 ದಾಟಿದ ಸಾವಿನ ಸಂಖ್ಯೆ

ಕಳೆದ 24 ಗಂಟೆಯಲ್ಲಿ 6088 ಹೊಸ ಸೋಂಕು ಪ್ರಕರಣಗಳು ದೃಢಪಡುವ ಮೂಲಕ ದೇಶದಲ್ಲಿ ಒಂದೇ ದಿನ ದಾಖಲೆಯ ಸೋಂಕು ಪತ್ತೆಯಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಯಲ್ಲಿ 6088 ಹೊಸ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 1.8 ಲಕ್ಷ ದಾಟಿದೆ.

ಕೊರೊನಾಗೆ 24 ಗಂಟೆಯಲ್ಲಿ 148 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3583 ಆಗಿದೆ.

ದೇಶದಲ್ಲಿ 66380 ಸಕ್ರಿಯ ಸೋಂಕು ಪ್ರಕರಣಗಳಿದ್ದು, 48583 ಮಂದಿ ಗುಣಮುಖರಾಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!