ಆನ್ ಲೈನ್ ಶಾಪ್ ಮಾಡಿ ಹಣ ಕಳೆದುಕೊಂಡು ಕಂಗಾಲಾದ ಮದ್ಯಪ್ರಿಯರು.!

ಲಾಕ್‌ಡೌನ್ ಆದ ಮೇಲೆ ಎಷ್ಟೋ ದಿನಗಳವರೆಗೆ ಮದ್ಯಪ್ರಿಯರಿಗೆ ಮದ್ಯ ಸಿಗದೆ ಪರದಾಡಿದ್ದರು. ಆದರೆ ಸರ್ಕಾರ ಕುಡುಕರ ಗೋಳು ನೋಡಲಾರದೆ ಅಂತೂ ಮದ್ಯದಂಗಡಿಗಳನ್ನು ತೆರೆಯೋದಕ್ಕೆ ಅಸ್ತು ಎಂದಿದೆ. ಆದರೆ ಒಂದಿಷ್ಟು ಷರತ್ತುಗಳನ್ನು ಹಾಕಿತ್ತು. ಅಂತರ ಕಾಯ್ದುಕೊಂಡು ಮದ್ಯ ಕೊಂಡುಕೊಳ್ಳಬೇಕು ಅಂತಾ. ಆದರೆ ಅಂತರವೂ ಇಲ್ಲ ಏನೂ ಇಲ್ಲ. ಇದರಿಂದ ಸೋಂಕು ಹರಡುತ್ತೆ ಎಂಬ ಕಾರಣಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ.

ಹೌದು, ಮಹಾರಾಷ್ಟ್ರದಲ್ಲಿ ಮದ್ಯದಂಗಡಿಗೆ ಹೋಗುವ ಬದಲು ಆನ್‌ಲೈನ್‌ನಲ್ಲಿಯೇ ಮದ್ಯ ಖರೀದಿ ಮಾಡಿ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಆದರೆ ಆನ್‌ಲೈನ್‌ನಲ್ಲಿ ಮದ್ಯ ಪ್ರಿಯರಿಗೆ ಮೋಸ ಮಾಡಲಾಗುತ್ತಿದೆಯಂತೆ. ನಕಲಿ ಖಾತೆ ತೆರೆದು ನಾವು ಮದ್ಯ ಕೊಡುತ್ತೇವೆ ಎನ್ನುತ್ತಿದ್ದಾರಂತೆ ಅನೇಕ ಮಂದಿ. ಹೀಗಾಗಿ ಅನೇಕರು ಆನ್‌ಲೈನ್ ಶಾಪ್ ಮಾಡಿ ಮೋಸ ಹೋಗುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇಲ್ಲಿ ಮೋಸ ಹೋದವರೆಲ್ಲಾ ದೊಡ್ಡ ದೊಡ್ಡ ಮಂದಿ ಎಂದು ಹೇಳಲಾಗುತ್ತಿದೆ. ರಾಜಕಾರಣಿಗಳು, ದೊಡ್ಡ ಉದ್ಯಮಿಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಬೆಲೆಯ ಮದ್ಯ ಖರೀದಿಗೆ ಮುಂದಾಗುತ್ತಿದ್ದಾರೆ. ಇಂತವರನ್ನು ನೋಡಿಯೇ ಆನ್‌ಲೈನ್‌ನಲ್ಲಿ ಮೋಸ ಮಾಡಲಾಗುತ್ತಿದೆ. ಇನ್ನು ಮರ್ಯಾದೆಗೆ ಅಂಜಿ ದೊಡ್ಡ ದೊಡ್ಡ ವ್ಯಕ್ತಿಗಳು ಕಂಪ್ಲೇಂಟ್ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!