ಮಗನ ಆನ್ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ 8 ಲಕ್ಷ ಕಳೆದುಕೊಂಡ ತಂದೆ..!

ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕ ಶಾಲೆಗಳು ಆನ್ಲೈನ್ ಕ್ಲಾಸ್ ಶುರು ಮಾಡಿವೆ. ಸಾಮಾನ್ಯವಾಗಿ ಮೇ. ತಿಂಗಳಿನಲ್ಲಿ ರಜೆಯಿರುತ್ತದೆ. ಜೂನ್ ನಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದ್ರೆ ಕೊರೊನಾ ಕಾರಣಕ್ಕೆ ಜೂನ್ ನಲ್ಲಿ ಶಾಲೆಗಳು ಆರಂಭವಾಗುವ ಅನುಮಾನವಿದೆ. ಹಾಗಾಗಿ ಆನ್ಲೈನ್ ಕ್ಲಾಸ್ ಗಳು ಈಗಿನಿಂದಲೇ ಶುರುವಾಗಿದೆ.

ಉತ್ತರ ಪ್ರದೇಶದಲ್ಲಿ ಮಗನ ಆನ್ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿದ ಪಾಲಕ ಹಣ ಕಳೆದುಕೊಂಡಿದ್ದಾನೆ. ಆನ್ಲೈನ್ ನಲ್ಲಿ ಮಗ ಗೇಮ್ ಕೂಡ ಆಡ್ತಿದ್ದ ಎನ್ನಲಾಗಿದೆ. ಇದಕ್ಕೆ ಪ್ರವೇಶ ಮಾಡಿದ ಹ್ಯಾಕರ್ಸ್, ಕ್ಲಾಸ್ ನೆಪ ಹೇಳಿ ತಂದೆ ಡೆಬಿಟ್ ಕಾರ್ಡ್, ಪಿನ್ ನಂಬರ್ ಕೇಳಿದ್ದಾರೆ. ನಂತ್ರ ಹಣ ದೋಚಿದ್ದಾರೆ. ಅಚ್ಚರಿಯೆಂದ್ರೆ ಬ್ಯಾಂಕ್ ಖಾತೆ ನಂಬರ್ ಕೂಡ ಬದಲಿಸಿದ್ದಾರೆ.

ಇದ್ರಲ್ಲಿ ಬ್ಯಾಂಕ್ ಸಿಬ್ಬಂದಿ ಸೇರಿದ್ದಾರೆಂದು ತಂದೆ ಆರೋಪ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

 

Share Post

Leave a Reply

error: Content is protected !!