ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ

ಹೊಸದಿಲ್ಲಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಪುರಾತನ ವಿಗ್ರಹ ಹಾಗೂ ಕೆಲ ಅವಶೇಷಗಳು ಪತ್ತೆಯಾಗಿವೆ.
ಕಪ್ಪು ಕಲ್ಲಿನ ಏಳು ಕಂಬಗಳು, ಕೆಂಪು ಕಲ್ಲಿನ ಆರು ಕಂಬಗಳು, ಐದು ಅಡಿ ಎತ್ತರದ ಶಿವಲಿಂಗ ಮತ್ತು ಕೆಲ ವಿಗ್ರಹಗಳ ಅವಶೇಷಗಳು ಪತ್ತೆಯಾಗಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಕಳೆದ ಹತ್ತು ದಿನಗಳಿಂದ ಇಲ್ಲಿ ನೆಲವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಂಬಗಳು ಮತ್ತು ಇತರ ವಸ್ತುಗಳ ಭಗ್ನಾವಶೇಷಗಳು ಪತ್ತೆಯಾಗಿವೆ ಎಂದು ಚಂಪತ್​ ರಾಯ್​ ಮಾಹಿತಿ ನೀಡಿದ್ದಾರೆ.

ಹಿಂದೆ ಈ ಸ್ಥಳದಲ್ಲಿ ಭವ್ಯ ಮಂದಿರಗಳಿದ್ದು, ಮಸೀದಿ ನಿರ್ಮಾಣಕ್ಕಾಗಿ ಆಕ್ರಮಣಕಾರರಿಂದ ಧ್ವಂಸಗೊಂಡಿವೆ ಎಂಬುದಕ್ಕೆ ಇಲ್ಲಿ ಪುರಾವೆಗಳು ದೊರೆಯುತ್ತವೇ ಇವೆ. 2003ಕ್ಕೂ ಮೊದಲು ಭಾರತದ ಪುರಾತತ್ವ ಇಲಾಖೆ ಅಲಹಾಬಾದ್ ಹೈಕೋರ್ಟ್‌ನ ಆದೇಶದ ಪ್ರಕಾರ ಉತ್ಖನನದ ಕಾರ್ಯ ನಡೆಸಿದ್ದು, ಈ ಸಂದರ್ಭದಲ್ಲಿ ಹಲವು ಅವಶೇಷಗಳು ಪತ್ತೆಯಾಗಿದ್ದವು. ವಿವಾದಿತ ಕಟ್ಟಡ ಇದ್ದ ಸ್ಥಳದಲ್ಲಿ ದೇವಾಲಯಗಳು ಅಸ್ತಿತ್ವದಲ್ಲಿದ್ದವು ಎಂಬುದು ಇದರಿಂದ ತಿಳಿದುಬರುತ್ತದೆ. ವಿವಾದಿತ ಕಟ್ಟಡವನ್ನು 1991ರ ಡಿಸೆಂಬರ್‌ನಲ್ಲಿ ನೆಲಸಮಗೊಳಿಸಲಾಯಿತು. ಆಗಲೂ ಅಲ್ಲಿ ಕೆತ್ತನೆ ಕಲ್ಲು ಮತ್ತು ಅಲಂಕೃತ ಇಟ್ಟಿಗೆಗಳು, ಕಂಬಗಳು, ದೇವರ ಶಿಲ್ಪ ಹಾಗೂ ಇತರ ವಸ್ತುಗಳು ಕಂಡುಬಂದಿದ್ದವು, ವಿಶೇಷವಾಗಿ ಸುಪ್ರೀಂ ಕೋರ್ಟ್ 2019ರ ನವೆಂಬರ್ 9 ರಂದು ನೀಡಿದ ತೀರ್ಪಿನಲ್ಲಿ ಪುರಾತತ್ವ ಇಲಾಖೆಯ 2003ರ ಆವಿಷ್ಕಾರಗಳನ್ನು ಉಲ್ಲೇಖಿಸಿದ್ದು, ಅಲ್ಲಿ ಬಹು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದ ರಚನೆ ಹಾಗೂ ಗೋಡೆಗಳ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ತೀರ್ಪು ನೀಡಿತ್ತು.

Share Post

Leave a Reply

Your email address will not be published. Required fields are marked *

error: Content is protected !!