ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸಬಾರದು: ಖಾಸಗಿ ಶಾಲೆಗಳಿಗೆ ಸರ್ಕಾರದ ಖಡಕ್ ಸುತ್ತೊಲೆ

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಎಲ್ಲಾ ಖಾಸಗಿ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು 2020-21 ನೇ ಸಾಲಿಗೆ ದಾಖಲಾತಿ ಮಾಡುವಾಗ ಸರ್ಕಾರದ ನಿಮಯ, ಮಾರ್ಗಸೂಚಿಯನ್ನು ತಪ್ಪದೆ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೊಲೆ ಹೊರಡಿಸಿದ್ದಾರೆ.

ಆರ್ಥಿಕವಾಗಿ ಸಮರ್ಥರಿರುವ ಮತ್ತು ಸ್ವಯಂ ಪ್ರೇರಿತರಾಗಿ ಬರಿಸುವವರಿಂದ ಮಾತ್ರ ಶುಲ್ಕ ಪಡೆಯಬೇಕು. 2019 -20ನೇ ಸಾಲಿನಲ್ಲಿ ನಿಗದಿಪಡಿಸಿದ ತರಗತಿವಾರು ಶುಲ್ಕವನ್ನೆ 20-21ನೇ ಸಾಲಿಗೂ ನಿಗದಿ ಮಾಡಬೇಕು.

ವಿದ್ಯಾರ್ಥಿಗಳು ಮತ್ತು ಪೋಷಕರ ಆಶಯದಂತೆ ಶಾಲಾ ಶುಲ್ಕವನ್ನು ಮಾಹೆವಾರು, ತ್ರೈಮಾಸಿಕವಾರು, ಅರ್ದವಾರ್ಷಿಕವಾರು ಕಂತುಗಳ ಮೂಲಕ ಪಾವತಿ ಮಾಡಲು ಅವಕಾಶ ಮಾಡಿಕೊಡಬೇಕು.

ಕೊರೋನಾ ಮತ್ತು ಲಾಕ್ಡೌನ್ ಕಾರಣ ರಾಜ್ಯದ ಜನತೆ ಬಹಳ ಸಂಕಷ್ಟದಲ್ಲಿ ಇರುವ ಕಾರಣ ಶುಲ್ಕ ಹೆಚ್ಚಳ ಮಾಡದಂತೆ ಸೂಚಿಸಲಾಗಿದೆ. ಆದರೆ ಕಳದೆ ವರ್ಷಕ್ಕಿಂತ ಕಡಿಮೆ ಶುಲ್ಕ ಪಡೆಯಲು ಖಾಸಗಿ ಶಾಲೆಗಳು ಸ್ವತಂತ್ರವಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಯಾವ ಕಾರಣಕ್ಕೂ ಆನ್ ಲೈನ್ ತರಗತಿ ನಡೆಸಬಾರದು ಎಂದು ಕಟ್ಟಿನಿಟ್ಟಿನ ಸೂಚನೆ ಕೊಡಲಾಗಿದ್ದು, ವಿದ್ಯಾರ್ಥಿಗಳಿಂದ ಪಠ್ಯಪುಸ್ತಕ ಶೂ, ಸಮವಸ್ತ್ರ ಹೆಸರಿನಲ್ಲಿ ಸುಲಿಗೆ ಮಾಡಬರದು ಎಂದೂ ಖಡಕ್ ಸೂಚನೆ ಕೊಡಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!