Friday, January 15, 2021
Home ಸುದ್ದಿ ಜಾಲ ಮಗು ಬಿಟ್ಟು ಪ್ರಿಯಕರನೊಂದಿಗೆ ಮಹಿಳೆ ಎಸ್ಕೇಪ್..!

ಇದೀಗ ಬಂದ ಸುದ್ದಿ

ಮಗು ಬಿಟ್ಟು ಪ್ರಿಯಕರನೊಂದಿಗೆ ಮಹಿಳೆ ಎಸ್ಕೇಪ್..!

ಹೋಂ ಕ್ವಾರಂಟೀನ್ ಮುಗಿಯುತ್ತಿದ್ದಂತೆ ತನ್ನ ಮಗುವನ್ನೂ ಲೆಕ್ಕಿಸದೆ ಮಹಿಳೆಯೊಬ್ಬರು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಗೃಹಿಣಿಯೊಬ್ಬರು ಕಳೆದ 8 ವರ್ಷದ ಹಿಂದೆ ಮದುವೆಯಾಗಿ ಗಂಡನ ಜೊತೆ ಸಂಸಾರ ಮಾಡುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಈ ಮಹಿಳೆ ಕೌಟುಂಬಿಕ ಜಗಳದಿಂದ ಗಂಡನ ಮನೆ ಬಿಟ್ಟು ತವರು ಮನೆ ಸೇರಿಕೊಂಡಿದ್ದಾರೆ. ಈಕೆಗೆ 8 ವರ್ಷದ ಮಗಳಿದ್ದಾಳೆ. ಈಕೆ ಕುಟುಂಬಸ್ಥರು ಸಂಬಂಧಿಕರ ಮದುವೆಗೆ ಹೋಗಿದ್ದರಿಂದ ಅಲ್ಲಿ ಯಾರಿಗೋ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಇವರ ಕುಟುಂಬದವರನ್ನು ಕ್ವಾರಂಟೀನ್ ಮಾಡಲಾಗಿದೆ. ಇದೇ ವೇಳೆ ಕುಟುಂಬಸ್ಥರು ಕ್ವಾರಂಟೀನ್‌ನಿಂದ ಬರುವಷ್ಟರಲ್ಲಿ ತಾನು ಪ್ರೀತಿಸುತ್ತಿದ್ದ ವಿವಾಹಿತ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

TRENDING