ಊರಿಗೆ ಹೋಗೋರು ಈಗ್ಲೇ ಪ್ಲಾನ್ ಮಾಡ್ಕೊಳಿ, ಶನಿವಾರವೇ ಹೊರಡುತ್ತೆ ಲಾಸ್ಟ್ ಬಸ್, ಭಾನುವಾರ ಸಂಪೂರ್ಣ ಬಂದ್

ಬೆಂಗಳೂರು: ಲಾಕ್​ಡೌನ್​ ನಿರ್ಬಂದ ಸಡಿಲಿಸದ ಬಳಿಕ ರಾಜ್ಯಾದ್ಯಂತ ಬಸ್​ ಸಂಚಾರ ಶುರುವಾಗಿದೆ. ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಮಗೆ ತಿಳಿದಿರಲಿ, ವೀಕೆಂಡ್​ನಲ್ಲಿ ಊರಿಗೆ ಹೋಗೋ ಪ್ಲಾನ್​ ನಿಮ್ಮದಾಗಿದ್ದರೆ ಮೊದಲೇ ಸಜ್ಜಾಗಿ ಏಕೆಂದರೆ ಭಾನುವಾರ ಬಸ್​ ರೈಲು ಸಂಚಾರವಿರಲ್ಲ. ಜತೆಗೆ, ಖಾಸಗಿ ವಾಹನಗಳು ಕೂಡ ರಸ್ತೆಗೆ ಇಳಿಯುವಂತಿಲ್ಲ. ಅಂದು ಸಂಪೂರ್ಣ ಲಾಕ್​ಡೌನ್​ ಇರಲಿದೆ ಎಂದು ಈಗಾಗಲೇ ರಾಜ್ಯ ಸಕಾರ ಆದೇಶ ಹೊರಡಿಸಿದೆ.

ಇದಲ್ಲದೇ, ಪ್ರತಿದಿನವೂ ರಾತ್ರಿ ಏಳು ಗಂಟೆಯಿಂದ ಬೆಳಗಿನ ಏಳು ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ದೂರದ ಊರುಗಳಿಗೆ ತೆರಳುವ ಬಸ್​ಗಳು ಬೆಳಗ್ಗೆಯೇ ಹೊರಟಿರುತ್ತವೆ. ಹತ್ತಿರದ ಊರುಗಳಿಗೆ ಮಧ್ಯಾಹ್ನದವರೆಗೂ ಬಸ್​ಗಳು ಸಂಚರಿಸಬಹುದು. ಹೀಗಾಗಿ ಶನಿವಾರಕ್ಕೆ ನಿಮ್ಮ ಪ್ರಯಾಣವನ್ನು ಪ್ಲಾನ್​ ಮಾಡಿಕೊಳ್ಳಿ. ಖಾಸಗಿ ವಾಹನಗಳಿಗೂ ಅವಕಾಶವಿಲ್ಲ: ಭಾನುವಾರ (ಮೇ 24) ಸಂಪೂರ್ಣ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಇಲ್ಲಿ ಯಾವುದೇ ವಿನಾಯ್ತಿಗಳಿಲ್ಲ. ಅತ್ಯಾವಶ್ಯಕ ಸೇವೆಯನ್ನು ಹೊರತುಪಡಿಸಿ ಬೇರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಬಸ್​, ಹಾಗೂ ರೈಲು ಸಂಚಾರ ಬಂದ್​. ಅಲ್ಲದೇ, ಖಾಸಗಿ ವಾಹನಗಳಲ್ಲಿಯೂ ಹೊರಗೆ ತೆರಳುವಂತಿಲ್ಲ.

ಪ್ರಯಾಣಕ್ಕೂ ಮುನ್ನ ಕೆಲ ಅಗತ್ಯ ಮುನ್ನೆಚ್ಚರಿಕೆಗಳನ್ನು ಪ್ರಯಾಣಿಕರೇ ತೆಗೆದುಕೊಳ್ಳುವುದು ಉತ್ತಮ. ಮಾಸ್ಕ್​ ಧರಿಸುವುದು ಕಡ್ಡಾಯ. ನಿಲ್ದಾಣದಲ್ಲಿ ಕೊಡುತ್ತಾರಾ ಇಲ್ಲವೂ ನೀವೇ ಚಿಕ್ಕದೊಂದು ಹ್ಯಾಂಡ್ ​ಸ್ಯಾನಿಟೈಸರ್​ ಇಟ್ಟುಕೊಳ್ಳಿ. ಬಸ್ ಹತ್ತುವ ಮುನ್ನ ಹಾಗೂ ಇಳಿದ ಬಳಿಕ ಕೈಗಳಲ್ಲಿನ ಸೋಂಕು ನಿವಾರಣೆ ಮಾಡಿಕೊಳ್ಳಿ. ಜ್ವರವಿದ್ದರೆ ಪ್ರಯಾಣದಿಂದ ದೂರವಿರಿ. ಇದು ನಿಮಗೂ ಹಾಗೂ ಇತರ ಪ್ರಯಾಣಿಕರಿಗೂ ಒಳ್ಳೆಯದು.

ಇನ್ನು, ರೈಲುಗಳಲ್ಲಿ ಸಂಚರಿಸುವವರು ತಮ್ಮ ಬಳಿಯಿರುವ ಸ್ಮಾರ್ಟ್​ಫೋನ್​ಗಳಲ್ಲಿ ಆರೋಗ್ಯ ಸೇತು ಆಯಪ್​ ಹೊಂದಿರಬೇಕು. ರೈಲಿನಲ್ಲಿ ಆಹಾರ ಪೂರೈಕೆ ಇರಲ್ಲ. ಹೊದಿಕೆಗಳನ್ನು ನೀಡಲ್ಲ. ಹೀಗಾಗಿ ಇದನ್ನೆಲ್ಲ ನೀವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ದೂರ ಪ್ರಯಾಣದ ಬಸ್​ಗಳಲ್ಲಿ ತೆರಳುವವರು ಊಟ, ಉಪಾಹಾರ ಜತೆಗೆ ಕೊಂಡೊಯ್ದರೆ ಉತ್ತಮ.

Share Post

Leave a Reply

Your email address will not be published. Required fields are marked *

error: Content is protected !!