ವಾಷಿಂಗ್ಟನ್: ಪ್ರೇಯಸಿ ಮೇಲೆ ಗುಂಡು ಹಾರಿಸಿದ ಬಳಿಕ ತಾನೇ ಗುಂಡು ಹೊಡೆದುಕೊಂಡು ಹಾಲಿವುಡ್ ನಟ ಹ್ಯಾಗನ್ ಮಿಲ್ಸ್ (29ವರ್ಷ) ಸಾವನ್ನಪ್ಪಿರುವ ಘಟನೆ ಅಮೆರಿಕದ ಕೆಂಟುಕಿಯಲ್ಲಿ ನಡೆದಿದೆ.
ಹಾಲಿವುಡ್ ಟಿವಿ ಸರಣಿ ಬಾಸ್ಕೆಟ್ಸ್ ನಲ್ಲಿ ನಟಿಸಿದ್ದ ಹ್ಯಾಗನ್ ತನಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇಂಟರ್ ನ್ಯಾಷನಲ್ ವೆಬ್ ಸೈಟ್ ಡೆಡ್ ಲೈನ್ ಆಯಂಡ್ ವೆರೈಟಿ ವರದಿ ಮಾಡದಿದೆ.
ಕೆಂಟುಕಿ ಮೇಫೀಲ್ಡ್ ನಲ್ಲಿದ್ದ ಪ್ರೇಯಸಿ ಎರಿಕಾ ಪ್ರೈಸ್ ಮೇಲೆ ಹ್ಯಾಗನ್ ಗುಂಡಿನ ದಾಳಿ ನಡೆಸಿದ್ದ. ಇದರಿಂದ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹ್ಯಾಗನ್ ತನಗೆ ತಾನೇ ಶೂಟ್ ಮಾಡಿಕೊಂಡಿದ್ದ. ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎರಿಕಾ ಮೇಫೀಲ್ಡ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಳು. ಗುಂಡಿನ ದಾಳಿಯಲ್ಲಿ ಆಕೆಯ ಕೈ ಮತ್ತು ಎದೆಗೆ ಗಾಯವಾಗಿತ್ತು ಎಂದು ವರದಿ ವಿವರಿಸಿದೆ. ಹ್ಯಾಗನ್ ಮಿಲ್ಸ್ 1990ರ ಆಗಸ್ಟ್ 9ರಂದು ಜನಿಸಿದ್ದ. ಹಾಲಿವುಡ್ ನ ಬಾಸ್ಕೆಟ್ಸ್ ಸರಣಿ ಹೊರತುಪಡಿಸಿ, 2016ರ ಸ್ವೀಡಿಶ್ ಡಿಕ್ಸ್, ಇನ್ ವಾಲಂಟರಿಯಲಿ ಸಿಂಗಲ್ ಸರಣಿಯಲ್ಲಿ ನಟಿಸಿರುವುದಾಗಿ ವರದಿ ಹೇಳಿದೆ.