ಶುದ್ಧ ನೀರಿನ ಲಭ್ಯತೆ ಇಲ್ಲದೇ ಅಮೇರಿಕದ 2 ಬಿಲಿಯನ್ ಜನರು ಕೋವಿಡ್-19 ಅಪಾಯದಲ್ಲಿ ಸಿಲುಕಿದ್ದಾರೆ

ವಾಷಿಂಗ್ ಟನ್ಕೋವಿಡ್-19 ವೈರಾಣು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಸಾಬೂನು ಹಾಗೂ ಶುದ್ಧ ನೀರಿನ ಲಭ್ಯತೆ ಇಲ್ಲದೇ 2 ಬಿಲಿಯನ್ ಜನರು ಕೋವಿಡ್-19 ರ ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.ಮಧ್ಯಮ ಹಾಗೂ ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿನ ಜನರು ಈ ರೀತಿಯ ಸಮಸ್ಯೆ ಎದುರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟಾವಾಗಿದ್ದು, 46 ರಾಷ್ಟ್ರಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನರಿಗೆ ಶುದ್ಧ ನೀರು, ಸಾಬೂನು ಲಭ್ಯವಾಗುತ್ತಿಲ್ಲ. ಭಾರತ, ಚೀನಾ, ಇಥಿಯೋಪಿಯಾ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಬಾಂಗ್ಲಾದೇಶ, ಪಾಕಿಸ್ತಾನ, ನೈಜೀರಿಯಾ, ಇಂಡೋನೇಷ್ಯಾಗಳಲ್ಲಿ ತಲಾ 50 ಮಿಲಿಯನ್ ವ್ಯಕ್ತಿಗಳು ಹ್ಯಾಂಡ್ ವಾಷ್ ಗೆ ಸೂಕ್ತ ಸೌಲಭ್ಯ ಹೊಂದಿಲ್ಲ, ಇವರೆಲ್ಲರೂ ಹೆಚ್ಚಿನ ಪ್ರಮಾಣದಲ್ಲೊ ಕೋವಿಡ್-19 ನ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!