ಆಲಿಕಲ್ಲಿನ ಆಕಾರ ನೋಡಿ ಬೆಚ್ಚಿಬಿದ್ದ ಜನ.!

ಮೆಕ್ಸಿಕೋದ ಜನ ಅಕ್ಷರಶಃ ಭಯಭೀತರಾಗಿದ್ದಾರೆ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ಕೊರೋನಾ ಎಂಬ ಮಹಾಮಾರಿ. ಈಗ ಹೆದರಲು ಮತ್ತೊಂದು ವಿಷಯವೇನೆಂದರೆ ಆಲಿಕಲ್ಲು ಮಳೆ. ಕಾರಣವೆಂದರೆ ಅದು ಕೊರೋನಾ ವೈರಸ್ ಮಾದರಿಯಲ್ಲಿರುವುದು. ಈಗ ಇದನ್ನು ದೇವರ ಸಂದೇಶ ಎಂದೇ ನಂಬಲಾಗಿದೆ. ಕೊರೋನಾ ವೈರಸ್ ಗೆ ಕೊರೋನಾ ಎಂದು ಹೆಸರು ಬರಲು ಲ್ಯಾಟಿನ್ ಭಾಷೆಯ ಕ್ರೌನ್ ಎಂಬ ಪದ ಕಾರಣ. ಕೊರೋನಾ ವೈರಸ್ ನಲ್ಲಿರುವ ಕಣಗಳ ಮಾದರಿಯಲ್ಲಿ ಆಲಿಕಲ್ಲಿನ ಮೇಲ್ಮೈನಲ್ಲಿ ಕಂಡ ಹಿನ್ನೆಲೆಯಲ್ಲಿ ಇದು ದೇವರು ಕಳುಹಿಸಿದ ಸಂದೇಶವಾಗಿದ್ದು, ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಹೇಳಿದಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದೀಗ ಕೊರೋನಾ ಕಣಗಳ ಆಲಿಕಲ್ಲಿನ ಫೋಟೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಆದರೆ, ಹವಾಮಾನ ತಜ್ಞರು ಹೇಳುವ ಪ್ರಕಾರ, ಭಾರಿ ಪ್ರಮಾಣದ ಬಿರುಗಾಳಿ ಬಂದರೆ, ಅದರ ಒತ್ತಡಕ್ಕೆ ಹೀಗೆ ಆಗುವ ಸಂಭವ ಇರುತ್ತದೆ, ಇದಕ್ಕೆ ಯಾರೂ ಭಯಪಡಬೇಕಿಲ್ಲ ಎಂಬ ಅಭಯ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!