Monday, January 25, 2021
Home ಬೆಂಗಳೂರು ಇದೀಗ ಯಲಹಂಕದಲ್ಲಿ ಕೊರೊನಾ ಕಾಟ:ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ದೃಢ

ಇದೀಗ ಬಂದ ಸುದ್ದಿ

ಇದೀಗ ಯಲಹಂಕದಲ್ಲಿ ಕೊರೊನಾ ಕಾಟ:ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ದೃಢ

ಬೆಂಗಳೂರು: ಯಲಹಂಕ ನ್ಯೂಟೌನ್ ನ ಖಾಸಗಿ ಆಸ್ಪತ್ರೆಯಲ್ಲಿ ಆಂಧ್ರ ಮೂಲದ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದು ಪರೀಕ್ಷೆ ನಡೆಸಿದಾಗ ಕರೋನಾ ಪಾಸಿಟಿವ್ ದೃಢಪಟ್ಟಿದೆ.ಆಂಧ್ರದ ಹಿಂದೂಪುರದ ನಿವಾಸಿ ಮೂಗಿನಲ್ಲಿ ರಕ್ತಸ್ರಾವ ತೊಂದರೆಯಿಂದ ಬಳಲುತ್ತಿದ್ದು ಮೊದಲಿಗೆ ಹಿಂದೂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದಿದ್ದಾರೆ. ಅಲ್ಲಿಂದ ಕರ್ನೂಲ್ ಗೆ ಹೋಗಿ ಅಲ್ಲಿ ಚಿಕಿತ್ಸೆ ದೊರಕದಿದ್ದಾಗ ಯಲಹಂಕ ನ್ಯೂಟೌನ್ ಖಾಸಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.ಯಲಹಂಕ ನ್ಯೂಟೌನ್ ನಲ್ಲಿರುವ ಖಾಸಗಿ ಆಸ್ಪತ್ರೆಯವರು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ಬೇಸ್ ಮೆಂಟ್ ನಲ್ಲಿ ಐಸೋಲೇಷನ್ ಸೆಂಟರ್ ಮಾಡಿಕೊಂಡಿದ್ದು ಅಲ್ಲೇ ರೋಗಿಯ ವಿವಿಧ ಪರೀಕ್ಷೆಗಳು ನಡೆಸಿದ್ದು ರೋಗಿಯು ಆಸ್ಪತ್ರೆಯಲ್ಲಿ ಓಡಾಟ ಮಾಡಿರುವುದು ಕಡಿಮೆ ಎನ್ನಲಾಗಿದೆ.ನಿನ್ನೆ ರಾತ್ರಿ ಈತನಿಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ರಾತ್ರಿಯೇ ಕೋವಿಡ್ ಅಂಬ್ಯುಲೆನ್ಸ್ ನಲ್ಲಿ ಶಿಫ್ಟ್ ಮಾಡಲಾಗಿದೆ.ರೋಗಿಯ ಸಂಪರ್ಕಕ್ಕೆ ಬಂದಿದ್ದ ಹತ್ತು ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

TRENDING