Saturday, September 26, 2020
Home ಅಂತರ್ ರಾಷ್ಟ್ರೀಯ ಕೊರೊನಾ ಕುರಿತು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದ ಚೀನಾ ವೈದ್ಯರು!

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

ಕೊರೊನಾ ಕುರಿತು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದ ಚೀನಾ ವೈದ್ಯರು!

ಬೀಜಿಂಗ್​: ಜಾಗತಿಕವಾಗಿ ಸಾವಿನ ರಣಕೇಕೆ ಹಾಕುತ್ತಿರುವ ಹೆಮ್ಮಾರಿ ಕೊರೊನಾ ವೈರಸ್​ ಕುರಿತಾದ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಕೋವಿಡ್​-19 ತವರು ಚೀನಾದಿಂದ ಕೇಳಿಬಂದಿದೆ. ಚೀನಾದ ಈಶಾನ್ಯ ಪ್ರದೇಶದ ರೋಗಿಗಳಲ್ಲಿ ಕೊರೊನಾ ವೈರಸ್​ ಹೊಸ ರೂಪತಾಳಿರುವುದು ಕಂಡುಬಂದಿದೆ.

ಕೊರೊನಾ ಸ್ಪೋಟಗೊಂಡ ವುಹಾನ್​ಗೆ ಹೋಲಿಕೆ ಮಾಡಿದರೆ, ಇದೀಗ ಈಶಾನ್ಯ ಪ್ರದೇಶದಲ್ಲಿ ಕಂಡುಬಂದಿರುವ ವೈರಸ್​ ರಚನೆ ಬಹಳ ವಿಭಿನ್ನವಾಗಿದೆ. ಬಹುಶಃ ಕೋವಿಡ್​-19 ತನ್ನ ವೇಷವನ್ನು ಬದಲಾಯಿಸಿದ್ದು, ತನ್ನ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಸಂಕೀರ್ಣತೆ ಸೃಷ್ಟಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈಶಾನ್ಯ ಚೀನಾ ಪ್ರಾಂತ್ಯದ ಜಿಲಿನ್​ ಮತ್ತು ಹೆಲ್ಜಿಯಾಂಗ್ ರೋಗಿಗಳಲ್ಲಿ ರೂಪಾಂತರಗೊಂಡ ಕೊರೊನಾ ಪತ್ತೆಯಾಗಿದೆ. ಇಲ್ಲಿನ ರೋಗಿಗಳು ದೀರ್ಘಾಕಾಲದವರೆಗೆ ವೈರಸ್​ ಅನ್ನು ತಮ್ಮೊಂದಿಗೆ ರವಾನೆ ಮಾಡಿರುವಂತೆ ಕಾಣುತ್ತಿದ್ದು, ಅವರಲ್ಲಿ ವೈರಸ್​ ನೆಗಿಟಿವ್​ ಫಲಿತಾಂಶ ಬರಲು ತುಂಬಾ ತಡವಾಗಿದೆ ಎಂದು ಚೀನಾದ ಪ್ರಮುಖ ವೈದ್ಯರು ತಿಳಿಸಿದ್ದಾರೆ.

ವುಹಾನ್​ನಲ್ಲಿ ರೋಗ ಲಕ್ಷಣ ನಿರ್ಣಯಿಸಲು ಒಂದರಿಂದ ಎರಡು ವಾರಗಳು ತೆಗದುಕೊಳ್ಳುತ್ತಿತ್ತು. ಆದರೆ, ಅದಕ್ಕಿಂತ ಹೆಚ್ಚಿನ ಕಾಲವನ್ನು ಈಶಾನ್ಯ ಚೀನಾದ ರೋಗಿಗಳಲ್ಲಿ ತೆಗೆದುಕೊಳ್ಳುತ್ತಿದೆ. ರೋಗ ನಿರ್ಣಯ ವಿಳಂಬದಿಂದಾಗಿ ರೋಗ ಹರಡುವುದನ್ನು ತಡೆಯಲು ತುಂಬಾ ಕಷ್ಟವಾಗುತ್ತಿದೆ ಎಂದು ಈಶಾನ್ಯ ಚೀನಾದಲ್ಲಿ ಚಿಕಿತ್ಸೆ ನೀಡುತ್ತಿರುವ ಪ್ರಮುಖ ವೈದ್ಯ ಕಿಯು ಹೈಬೋ ಹೇಳಿದ್ದಾರೆ.

ಆಘಾತಕಾರಿಯೆಂದರೆ ದೀರ್ಘಾವದಿಯಲ್ಲಿ ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣಗಳು ಗೋಚರಿಸುವುದಿಲ್ಲ. ಇದು ಕುಟುಂಬ ಸೋಂಕಿಗೆ ಗುರಿಯಾಗಲಿದೆ. ಶುಲನ್​, ಜಿಲಿನ್​ ಮತ್ತು ಶೆಂಗ್ಯಾಂಗ್ ಸುತ್ತ ಸೋಂಕು ಹರಡಿದ್ದು, ಕಳೆದ 2 ವಾರಗಳಿಂದ 46 ಪ್ರಕರಣಗಳು ವರದಿಯಾಗಿದೆ. ಎರಡು ಪ್ರಾಂತ್ಯದಲ್ಲಿ ಸುಮಾರು 100 ಮಿಲಿಯನ್​ಗೂ ಅಧಿಕ ಮಂದಿ ವಾಸವಿದ್ದು, ಮತ್ತೊಮ್ಮೆ ಸೋಂಕು ತಡೆಗಟ್ಟಲು ಲಾಕ್​ಡೌನ್​ ಮರು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಕೊರೊನಾ ವೈರಸ್​ ತನ್ನ ರೂಪ ಬದಲಾವಣೆ ಮಾಡಿರುವ ಬಗ್ಗೆ ವಿಜ್ಞಾನಿಗಳು ಈವರೆಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ. ಆದರೆ, ಚೀನಾ ವೈದ್ಯರು ವುಹಾನ್​ಗಿಂತ ಈಶಾನ್ಯ ಚೀನಾದ ರೋಗಿಗಳಲ್ಲಿ ರೂಪ ಬದಲಾವಣೆ ಲಕ್ಷಣಗಳು ಕಾಣಿಸಿವೆ ಎಂದು ವಾದ ಮಂಡನೆ ಮಾಡಿದ್ದಾರೆ.

ಅಲ್ಲದೆ, ಈಶಾನ್ಯ ಚೀನಾದ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣ ಶ್ವಾಸಕೋಸಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ್ದಾರೆ. ಆದರೆ, ವುಹಾನ್​ನಲ್ಲಿ ಬಹು ಅಂಗಾಗಳ ಮೇಲೆ ವೈರಸ್​ ಪ್ರಭಾವ ಬೀರುತ್ತಿತ್ತು. ಇದೀಗ ವೈರಸ್​ನ ಹೊಸ ರೂಪಕ್ಕೂ ರಷ್ಯಾಗೂ ಸಂಬಂಧವಿದೆ ಎಂದು ನಂಬಲಾಗಿದೆ. ಯೂರೋಪ್​​ನಲ್ಲೂ ಕೊರೊನಾ ವೈರಸ್​ ಹೆಚ್ಚು ಪರಿಣಾಮ ಬೀರಿತ್ತು. ಯೂರೋಪ್​ನ ಅನುವಂಶಿಕ ಅನುಕ್ರಮ​ವು ಈಶಾನ್ಯ ಚೀನಾದ ಅನುಕ್ರಮಕ್ಕೆ ಹೊಂದಾಣಿಕೆಯಾಗಿದೆ ಎಂದು ಕಿಯು ಹೈಬೋ ತಿಳಿಸಿದ್ಸಾರೆ.

TRENDING