ಕರ್ನಾಟಕದಲ್ಲಿ ಇಂದು ಹೊಸದಾಗಿ 22 ಮಂದಿಗೆ ಕೋರಾನ ಸೊಂಕು

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ 22 ಮಂದಿಗೆ ಕೋರಾನ ಸೊಂಕು ಇರೋದು ಕಂಡು ಬಂದಿದೆ. ಮೊನ್ನೆ ತನಕ ಗ್ರೀನ್‌ ಜೋನ್‌ನಲ್ಲಿ ಇದ್ದ ಹಾವೇರಿ ಹಾಗೂ ಧಾರವಾಡದಲ್ಲಿ ಹೊಸ ತಲಾ ಒಂದು ಕೇಸ್‌ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಹೆಚ್ಚಳ ಮಾಡಿದೆ. ಇದಲ್ಲದೇ ದಾವಣೆಗೆರಯಲ್ಲಿ ಇಂದು ಒಂದೇ ದಿನ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು 12 ಮಂದಿಗೆ ಕೋವಿಡ್‌ ಸೊಂಕು ಇರುವುದು ಪತ್ತೆಯಾಗಿದ್ದು, ಇಲ್ಲಿಗೆ ಸೊಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಂದೇ ದಿನ ಕರೋನಾ ವೈರಸ್‌ಗೆ ಎರಡು ಬಲಿಯಾಗಿದ್ದು, ಇಂದು ಬೆಳಗ್ಗೆ ವಿಜಯಪುರದ ಮಹಿಳೆ ಹಾಗೂ ಇಂದು ಮಧ್ಯಾಹ್ನ ದಾವಣಗೆರಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ೧೨, ಬಳ್ಳಾರಿ ೦೧, ದ.ಕನ್ನಡ ೦೧, ಧಾರವಾಡ ೦೧, ಭಾಗಲಕೋಟೆ ೦೨, ಬೆಂಗಳೂರು ೦೩, ಉ. ಕನ್ನಡ ೦೧, ಹಾವೇರಿ ೦೧, ದಾರವಾಡ ೦೧ ಮಂದಿಗೆ ಇಂದು ಸೊಂಕು ಕಾಣಿಸಿಕೊಂಡಿದೆ.

 

Share Post

Leave a Reply

Your email address will not be published. Required fields are marked *

error: Content is protected !!