ಪತ್ರಕರ್ತೆ ನೇಣಿಗೆ ಶರಣು: ಎಸ್ಪಿ ಮುಖಂಡ ಶಮೀಮ್ ನೊಮಾನಿ ಬಂಧನ

ವಾರಣಾಸಿ: ಹವ್ಯಾಸಿ ಪತ್ರಕರ್ತೆ ರಿಜ್ವಾನಾ ತಬಸ್ಸುಮ್​ (28) ಎಂಬುವರು ನೇಣಿಗೆ ಶರಣಾಗಿದ್ದು, ಅವರು ಬರೆದಿಟ್ಟ ಡೆತ್​​ನೋಟ್​​ ಆಧಾರದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಶಮೀಮ್​ ನೊಮಾನಿ ಅವರನ್ನು ಬಂಧಿಸಲಾಗಿದೆ.ವಾರಣಾಸಿ ಜಿಲ್ಲೆಯ ಹರ್ಪಲ್ಪುರದಲ್ಲಿ ಸೋಮವಾರ ತಬಸ್ಸುಮ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಡೆತ್ ನೋಟ್ ನಲ್ಲಿ ಸಾವಿಗೆ ‘ಶಮೀಮ್ ನೋಮಾನಿ ಜವಾಬ್ದಾರಿ’ ಎಂದು ಬರೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಮೀಮ್​ ಅವರನ್ನು ಸೋಮವಾರ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ರಿಜ್ವಾನಾ ಅವರ ಮರಣೋತ್ತರ ವರದಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತಬಸ್ಸುಮ್ ಅವರ ತಂದೆಯ ದೂರಿನ ಮೇರೆಗೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಮೀಮ್ ನೊಮಾನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾರಣಾಸಿ ಸದರ್ ಸಿಒ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!