Saturday, September 26, 2020
Home ಜಿಲ್ಲೆ ಬೆಂಗಳೂರು ಗ್ರಾಮಾಂತರ ಕೊರೊನಾ ಸೋಂಕಿತನ ಬಂಧನಕ್ಕೆ ತೆರಳಿದ್ದ 22 ಮಂದಿ ಸಿಬ್ಬಂದಿಗೆ ಕ್ವಾರಂಟೈನ್

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ 88ನೇ ಹುಟ್ಟುಹಬ್ಬ,...

ನವದೆಹಲಿ : ಕಾಂಗ್ರೆಸ್ ಮುತ್ಸದ್ದಿ ಮತ್ತು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಇಂದು 88ನೇ ಜನ್ಮದಿನದ ಸಡಗರ-ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಜಮ್ಮು ಮತ್ತು ಕಾಶ್ಮೀರದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ ಶನಿವಾರ ಭೂ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ...

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

 ನವದೆಹಲಿ : ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಚಂಡೀಗಢದ ಪೋಸ್ಟ್ ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ನಲ್ಲಿ ಆರಂಭಗೊಂಡಿದೆ.

ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಕರ್ನಾಟಕ...

ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು...

ಕೃಷ್ಣ ಜನ್ಮಭೂಮಿ ಮಥುರಾ ಬಳಿ ಮಸೀದಿ ತೆರವು...

ಮಥುರಾ: ಇಲ್ಲಿನ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದ್ದು. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳ ಎಂದು ವಕೀಲ ವಿಷ್ಣು ಜೈನ್ ಎಂಬುವವರು ಪ್ರತಿಪಾದಿಸಿದ್ದು, ಈ ಕುರಿತು...

ಕೊರೊನಾ ಸೋಂಕಿತನ ಬಂಧನಕ್ಕೆ ತೆರಳಿದ್ದ 22 ಮಂದಿ ಸಿಬ್ಬಂದಿಗೆ ಕ್ವಾರಂಟೈನ್

ಗೌರಿಬಿದನೂರು: ಕೊರೊನಾ ಸೋಂಕು ತಗಲಿರುವ ಯುವಕನೊಬ್ಬನನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಎಸ್‍ಐ ಸೇರಿದಂತೆ 10 ಮಂದಿ ಪೊಲಿಸರನ್ನು ಹಾಗೂ ಚಂದನದೂರು ಗ್ರಾಪಂ ಪಿಡಿಓ, ಗ್ರಾಮಪಡೆಯ 12 ಮಂದಿ ಯುವಕರನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ.

ಮಾ.23 ರಂದು ಬೆಳಗಿನ ಜಾವ 3-30 ರಲ್ಲಿ ಹಿಂದೂಪುರದಿಂದ ಬೆಂಗಳೂರಿಗೆ ದನದ ಮಾಂಸವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಬೊಲೇರೋ ಗೂಡ್ಸ್ ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿದ್ದ 3 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮೂರು ಮಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಐಸೋಲೇಶನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಕ್ವಾರಂಟೈನಲ್ಲಿದ್ದ ಮೂವರನ್ನು ತಪಾಸಣೆಗೊಳಪಡಿಸಿದಾಗ ಓರ್ವ ಯುವಕನಿಗೆ ಕೊರೊನಾ ಪಾಸಿಟೀವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ , ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಮತ್ತು ಇತರೆ ಸಿಬ್ಬಂದ್ದಿ ಸೇರಿ 22 ಮಂದಿಯನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್‍ನಲ್ಲಿರಿಸಲಾಗಿದೆ.

22 ಮಂದಿಯ ಗಂಟಲು ಧ್ರವ ಮತ್ತು ರಕ್ತವನ್ನು ಪರೀಕ್ಷೆಗೆ ರವಾನಿಸಲಾಗಿದ್ದು ವರದಿ ಬಂದ ಬಳಿಕವಷ್ಟೇ ಕೊರೊನಾ ಸೋಂಕು ಹರಡಿರುವ ಬಗ್ಗೆ ದೃಡಪಡಿಸಲಾಗುವುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

# ಐಜಿ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ವಿಭಾಗದ ಐಜಿ ಶರತ್‍ಚಂದ್ರ ನಗರಕ್ಕೆ ಬೇಟಿ ನೀಡಿ ಕ್ವಾರಂಟೈನಲ್ಲಿದ್ದ ಸಿಬ್ಬಂದ್ದಿಗಳನ್ನು ಬೇಟಿ ಮಾಡಿ ಯಾವುದೇ ರೀತಿಯ ಆತಂಕಪಡದಂತೆ ಸಿಬ್ಬಂದಿಗಳಿಗೆ ದೈರ್ಯ ತುಂಬಿದರು.

# ಸಮಸ್ಯೆ ಆಲಿಸಿದ ಐಜಿ:
ನಗರದ ಪೊಲೀಸ್ ವಸತಿ ಗೃಹ ಸಮುಚ್ಚಯಕ್ಕೆ ಭೇಟಿ ನೀಡಿದ ಐಜಿ ಶರತ್ ಚಂದ್ರ ಪೊಲೀಸ್ ಸಿಬ್ಬಂದ್ದಿಗಳ ಹೆಂಡತಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು, ಬಹುತೇಕ ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಕೇಳಿಬಂದ ಹಿನ್ನೆಲೆಯಲ್ಲಿ ಒಂದು ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ಥಾವನೆಯನ್ನು ಸಲ್ಲಿಸುವಂತೆ ವೃತ್ತ ನಿರೀಕ್ಷಕರಿಗೆ ಸೂಚಿಸಿದರು.

# ತುರ್ತುಸೇವೆ:
ತುರ್ತು ಔಷಧಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ತರಲು ಒರ್ವ ಸಿಬ್ಬಂದ್ದಿಯನ್ನೂ ಸಹ ಈಗಾಗಲೇ ನೇಮಿಸಲಾಗಿದೆ ಎಂದು ಸಿಪಿಐ ಎಸ್.ರವಿ ಈ ಸಂದರ್ಭದಲ್ಲಿ ತಿಳಿಸಿದರು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ವೃತ್ತನಿರೀಕ್ಷಕ ಎಸ್.ರವಿ. ಎಸ್‍ಐಗಳಾದ ಅವಿನಾಶ್, ರಾಘವೇಂದ್ರ ಈ ಸಂದರ್ಭದಲ್ಲಿ ಆಗಮಿಸಿದ್ದರು.

TRENDING