Wednesday, January 27, 2021
Home ರಾಜಕೀಯ ರೈತರು, ಕಾರ್ಮಿಕರು, ಚಾಲಕರು - ಬಡವರಿಗೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಪತ್ರ ಬರೆದ -...

ಇದೀಗ ಬಂದ ಸುದ್ದಿ

ರೈತರು, ಕಾರ್ಮಿಕರು, ಚಾಲಕರು – ಬಡವರಿಗೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಪತ್ರ ಬರೆದ – ಸಿಎಂ ಸಿದ್ದರಾಮಯ್ಯ

ರೈತರು, ಬಡವರು, ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಕಟ್ಟಡ ಕಾರ್ಮಿಕರು, ಬಡವರು, ರೈತರು, ದಿನಗೂಲಿ ಕಾರ್ಮಿಕರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾವಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸುವ ಜೊತೆಗೆ ಲಾಕ್ಡೌನ್ ಅವಧಿಯ ವೇತನ ಬಿಡುಗಡೆಗೆ ಸಂಬಂಧಿತ ಸಂಸ್ಥೆಗಳ ಮಾಲೀಕರ ಮನವೊಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಲಾಕ್ಡೌನ್ ಜಾರಿಯಾಗಿರುವುದರಿಂದ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿವೆ. ಸಣ್ಣ, ಮಧ್ಯಮ ಕೈಗಾರಿಕೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅಸಂಘಟಿತ ವಲಯದ ಕಾರ್ಮಿಕರು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ದಿನದ ದುಡಿಮೆ ಆಧರಿಸಿ ಬದುಕುತ್ತಿದ್ದವರ ನೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸವಿತಾ ಸಮಾಜ, ನೇಕಾರರು, ಗಾರ್ಮೆಂಟ್ಸ್ ಕೆಲಸಗಾರರು, ಕಟ್ಟಡ ಕಾರ್ಮಿಕರು, ಚಾಲಕರು, ಹಮಾಲರು, ಸಿನಿಮಾ, ಕಿರುತೆರೆಯ ಕಾರ್ಮಿಕರು, ಮೀನುಗಾರರಿಗೆ ನೆರವು ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

 

TRENDING