ಪ್ರಧಾನಿ ಮೋದಿ ದೀಪ ಬೆಳಗಲು ಹೇಳಿರುವುದರ ಹಿಂದಿದೆ ಈ ʼರಹಸ್ಯʼ- ಹೆಚ್.ಡಿ. ಕುಮಾರಸ್ವಾಮಿ

1980 ರ ಏಪ್ರಿಲ್ 6 ಬಿಜೆಪಿ ಸಂಸ್ಥಾಪನಾ ದಿನ. ಇದೇ ಏಪ್ರಿಲ್ 5ಕ್ಕೆ ಬಿಜೆಪಿಗೆ 40 ವರುಷ  ತುಂಬುತ್ತದೆ. ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲು ಕೊರೋನಾ ಸಂಕಷ್ಟದ ದುರುಪಯೋಗ ಮಾಡಿಕೊಳ್ಳಲಾಗಿದೆಯೇ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನದ ಆಚರಣೆಗೆ ಪ್ರಧಾನಿ ಮೋದಿ ಸಂಕಷ್ಟದ ಸಂದರ್ಭ ದುರುಪಯೋಗ ಮಾಡಿಕೊಂಡರೆ ಎಂದು ಪ್ರಶ್ನಿಸಿದ್ದು, ಬಿಜೆಪಿ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಸಂಕಷ್ಟದ ದಿನಗಳಲ್ಲಿ ನೇರಾನೇರ ಆಚರಿಸಲು ಹಿಂಜರಿದು ಪರೋಕ್ಷವಾಗಿ ಇಡೀ ದೇಶದ ಜನರ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆ ಎಂದು ಟೀಕಿಸಿದ್ದಾರೆ.

ದೇಶದ ಜನರ ಸಂಕಟ ಬಗೆಹರಿಸುವ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೆ ಪ್ರಧಾನಿ ಏಪ್ರಿಲ್ 5ನ್ನೇ ಆಯ್ದು ಕೊಂಡಿದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣಗಳಿವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇದೆ. ಈಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಇಂತಹ ತೋರಿಕೆಯ ಸಂಭ್ರಮ ಬೇಕೆ ಎಂದು ಪ್ರಶ್ನಿಸಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!