Friday, September 25, 2020
Home ಅಂತರ್ ರಾಜ್ಯ ಲಾಕ್ ಡೌನ್ ಪರಿಣಾಮ:ವಸತಿ-ಆಹಾರವಿಲ್ಲದೆ 8ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ.ಮೀ ನಡೆದ ವಲಸೆ ಕಾರ್ಮಿಕ

ಇದೀಗ ಬಂದ ಸುದ್ದಿ

ನಟಿ ದೀಪಿಕಾರನ್ನು ರೋಲ್ ಮಾಡಲ್ ಆಗಿ ಅನುಸರಿಸಿರುವವರಿಗೆ...

 ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ, ರಾಜಕಾರಣಿ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಬಾವಿಲಾಸ ಅರಮನೆ ರತ್ನಖಚಿತ ಸಿಂಹಾಸನ : ...

ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಿರುವ ರತ್ನಖಚಿತ ಸಿಂಹಾಸನ ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ...

ಎಸ್.ಪಿ ಬಾಲಸುಬ್ರಹ್ಮಣ್ಯಂ ಪರಿಚಯವೇ ನನ್ನ ಜೀವನಕ್ಕೆ ದೊಡ್ಡ...

ಧಾರವಾಡ: ಸಂಗೀತ ಸ್ವರ ಲೋಕದ ಮಾಂತ್ರಿತ, ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್​ಪಿಬಿ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಗಾನ ಗಾರುಡಿಗನ ಬಗ್ಗೆ...

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ

ಮೈಸೂರು: ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ತಡೆದು ಪ್ರತಿಭಟನೆ ನಡೆಸಿದರು.

ವಿಜಯಪುರ-ಕಲಬುರ್ಗಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

 ವಿಜಯಪುರ: ಇಲ್ಲಿನ ಸಿಂದಗಿ ಬೈಪಾಸ್ ಬಳಿ ವಿಜಯಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಶಕ್ತಿಕುಮಾರ ಉಕಮನಾಳ ನೇತೃತ್ವದಲ್ಲಿ ರೈತರು ಹೆದ್ದಾರಿ...

ಲಾಕ್ ಡೌನ್ ಪರಿಣಾಮ:ವಸತಿ-ಆಹಾರವಿಲ್ಲದೆ 8ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ.ಮೀ ನಡೆದ ವಲಸೆ ಕಾರ್ಮಿಕ

ಲಾಕ್ ಡೌನ್ ಪರಿಣಾಮ ಊಟ-ವಸತಿಯಿಲ್ಲದೆ ವ್ಯಕ್ತಿಯೋರ್ವ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ. ಮೀ ನಡೆದುಕೊಂಡೇ ಕ್ರಮಿಸಿದ ಘಟನೆ ಸಹರನ್ ಪುರದಲ್ಲಿ ನಡೆದಿದೆ.

ಭಾರತದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ವಕಿಲ್ ಎಂಬ ವ್ಯಕ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ನಂತರ ಆತನ ಮಾಲಿಕ ಮನೆಯನ್ನು ಬಿಟ್ಟು ತೆರಳುವಂತೆ ಸೂಚಿಸಿದ್ದರು. ಮಾತ್ರವಲ್ಲದೆ ಯಾವುದೇ ಹಣವನ್ನು ಕೂಡ ನೀಡಿರಲಿಲ್ಲ.

ವಸತಿ, ಆಹಾರದ ವ್ಯವಸ್ಥೆಯಿಲ್ಲದೆ ವಕಿಲ್ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಸಹರಾನ್ ಪುರದಿಂದ ತನ್ನ ಗ್ರಾಮಕ್ಕೆ ಗುರುವಾರ ಹೊರಟಿದ್ದಾನೆ. ಆದರೆ ದಾರಿಯಲ್ಲಿ ಯಾವುದೇ ವಾಹನಗಳು ಸಿಗದೆ ಮತ್ತು ಹೊಟೇಲ್ ಗಳು ಸಿಗದ ಕಾರಣ ಅನ್ನ, ಆಹಾರವಿಲ್ಲದೆ 100 ಕಿ. ಮೀ ಕ್ರಮಿಸಿದ್ದಾರೆ.

ಶನಿವಾರ ಈ ಇಬ್ಬರು ಮೀರತ್‌ನ ಸೊಹ್ರಾಬ್ ಗೇಟ್ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ದಣಿದ ದಂಪತಿಗಳಾದ ವಕಿಲ್ ಮತ್ತು ಯಸ್ಮೀನ್ ಅವರನ್ನು ಸ್ಥಳೀಯ ನಿವಾಸಿಗಳಾದ ನವೀನ್ ಕುಮಾರ್ ಮತ್ತು ರವೀಂದ್ರ ಅವರು ಗುರುತಿಸಿ ನೌಚಂಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರೇಂಪಾಲ್ ಸಿಂಗ್ ಅವರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಣ ಮತ್ತು ಆಹಾರವನ್ನು ನೀಡಿ, ಆಯಂಬುಲೆನ್ಸ್ ಮೂಲಕ ಸಹರಾನ್‌ಪುರದಿಂದ ಬುಲಂದ್‌ಶಹರ್‌ ಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಲಕ್ಷಾಂತರ ವಲಸೆ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಮಾತ್ರವಲ್ಲದೆ ಆಹಾರ-ವಸತಿಗಳಿಲ್ಲದ ಕಾರಣ ಬೇರೆ ಯಾವುದೇ ಮಾರ್ಗಗಳಿಲ್ಲದ ನೂರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಹಳ್ಳಿಗಳಿಗೆ ನಡೆಯುತ್ತಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕ್ಷಮೆಯಾಚಿಸಿದ್ದಾರೆ.

TRENDING