Monday, January 25, 2021
Home ದೇಶ ಸ್ಪೈಸ್ ಜೆಟ್ ನಲ್ಲಿ ಪ್ರಥಮ ಕೋವಿಡ್-19 ಪ್ರಕರಣ : ಓರ್ವ ಪೈಲಟ್ ಗೆ ಸೋಂಕು ದೃಢ

ಇದೀಗ ಬಂದ ಸುದ್ದಿ

ಸ್ಪೈಸ್ ಜೆಟ್ ನಲ್ಲಿ ಪ್ರಥಮ ಕೋವಿಡ್-19 ಪ್ರಕರಣ : ಓರ್ವ ಪೈಲಟ್ ಗೆ ಸೋಂಕು ದೃಢ

ನವದೆಹಲಿ: ಸ್ಪೈಸ್​ ಜೆಟ್​ ಪೈಲಟ್​ ಓರ್ವನಿಗೆ ಕೊರೊನಾ ವೈರಸ್​ ತಗುಲಿದೆ. ಆದರೆ ಈ ಪೈಲಟ್​ ಮಾರ್ಚ್​ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಾರ್ಯನಿರ್ವಹಿಸಿರಲಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

ಸ್ಪೈಸ್​ಜೆಟ್​ನಲ್ಲಿ ಪ್ರಥಮ ಕೋವಿಡ್​-19 ಪ್ರಕರಣ ಪತ್ತೆಯಾಗಿದೆ. ನಮ್ಮ ಓರ್ವ ಪೈಲಟ್​​ಗೆ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಚ್​ ಪ್ರಾರಂಭದಿಂದಲೂ ಯಾವುದೇ ಅಂತಾರಾಷ್ಟ್ರೀಯ ವಿಮಾನದಲ್ಲೂ ಕಾರ್ಯ ನಿರ್ವಹಣೆ ಮಾಡಿರಲಿಲ್ಲ. ಹಾಗಿದ್ದಾಗಿ ಕೂಡ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಲಾಗಿತ್ತು. ಮಾ.28ರಂದು ವೈದ್ಯಕೀಯ ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿದೆ ಎಂದು ಸ್ಪೈಸ್​ಜೆಟ್​ನ ವಕ್ತಾರ ತಿಳಿಸಿದ್ದಾರೆ.

ಈ ಪೈಲಟ್​ ಕೊನೇದಾಗಿ ಮಾರ್ಚ್​ 21ರಂದು ಚೆನ್ನೈ-ದೆಹಲಿ ವಿಮಾನದಲ್ಲಿ ಕಾರ್ಯ ನಿರ್ವಹಿಸಿದ್ದ. ಅವತ್ತಿನಿಂದಲೇ ಆತನನ್ನು ಕ್ವಾರೆಂಟೈನ್​ನಲ್ಲಿ ಇಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಆ ವಿಮಾನದ ಎಲ್ಲ ಸಿಬ್ಬಂದಿ, ಪೈಲಟ್​ ಸಂಪರ್ಕಕ್ಕೆ ಹೋಗಿರುವ ಮಂದಿಯನ್ನೆಲ್ಲ ಕ್ವಾರೆಂಟೈನ್​ನಲ್ಲಿ ಇಡಲಾಗಿದೆ. ಮುಂದಿನ 14 ದಿನ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

TRENDING