ಭಾರತದಲ್ಲಿ ಸಾಕಷ್ಟು ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ಸಂಗ್ರಹವಿದೆ : ಸಂಜೀವ್ ಸಿಂಗ್

ನವದೆಹಲಿವಿಶ್ವದ 3ನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಿರುವ ಭಾರತದಲ್ಲಿ ಸಾಕಷ್ಟು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (ಎಲ್‌ಪಿಜಿ) ಸಂಗ್ರಹವಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಮೂರು ವಾರಗಳ ಕಾಲ ಘೋಷಣೆ ಮಾಡಲಾಗಿರುವ ಲಾಕ್​ಡೌನ್ ನಂತರವೂ ಸಾಕಷ್ಟು ಇಂಧನದ ಸಂಗ್ರಹವಿದೆ. 21 ದಿನಗಳ ಲಾಕ್‌ಡೌನ್ ಘೋಷಣೆಯಾದ ದಿನ ತನ್ನ ತಂದೆಯ ಮರಣದ ಹೊರತಾಗಿಯೂ ಇಂಧನವು ದೇಶದ ಪ್ರತಿ ಮೂಲೆ,ಮೂಲೆಗೂ ತಲುಪುವಂತೆ ನೋಡಿಕೊಳ್ಳುವ ಮಹತ್ತರ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಸಂಜೀವ್ ಸಿಂಗ್ ನೋಡಿಕೊಳ್ಳುತ್ತಿದ್ದಾರೆ.

ನಾವು ಏಪ್ರಿಲ್ ಮತ್ತು ಅದರ ನಂತರದ ದಿನಗಳಿಗೆ ಇಂಧನದ ಬೇಡಿಕೆಯನ್ನು ಮ್ಯಾಪ್ ಮಾಡಿದ್ದೇವೆ. ಎಲ್ಲಾ ಬೇಡಿಕೆಗಳನ್ನು ಪೂರೈಸುವಷ್ಟರ ಮಟ್ಟದಲ್ಲಿ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತಿವೆ. ಶೇಖರಣಾ ಕೇಂದ್ರಗಳಲ್ಲದೆ, ಎಲ್​ಪಿಜಿ ವಿತರಕರು ಮತ್ತು ಪೆಟ್ರೋಲ್ ಪಂಪ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಕೊರತೆಯಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್​ಡೌನ್​ ಘೋಷಣೆ ನಂತರ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು, ವಿಮಾನಯಾನ, ರೈಲು ಸೇರಿದಂತೆ ಎಲ್ಲಾ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದ್ದು, ಇಂಧನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!