ಭಾರತದಲ್ಲಿ ನೂರು ಮಂದಿ ದುಬೈನಿಂದ ಬಂದವರಲ್ಲೇ ಹೆಚ್ಚಿತ್ತು ಕೊರೋನಾ ಸೋಂಕು..!

ನವದೆಹಲಿ: ಈಗ ಭಾರತದಲ್ಲಿ ಕೊರೋನಾ ವೈರಸ್ ಪಾಸಿಟಿವ್ ನಿಂದ ಬಳಲುತ್ತಿರುವವರಲ್ಲಿ ನೂರು ಮಂದಿ ದುಬೈನಿಂದ ಬಂದವರೇ ಆಗಿದ್ದಾರೆ ಎಂಬ ವರದಿ ಆತಂಕಗೊಳಿಸಿದೆ.

ಹೀಗೆ ದುಬೈನಿಂದ ಬಂದು ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೂ ತೆರಳಿದ್ದವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.

ಇನ್ನು ಕೇರಳದಲ್ಲಿ ಗಮನಿಸುವುದಾದರೆ 34 ಮಂದಿಗೆ ಕರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ 25 ಮಂದಿ ದುಬೈಯಿಂದ ಬಂದವರೇ ಆಗಿದ್ದಾರೆ.

ಮಾ.12ರಂದು ಕಾಸರಗೋಡಿನಿಂದ ಬಂದಿದ್ದ ವ್ಯಕ್ತಿ ಹಲವರನ್ನು ಭೇಟಿಯಾಗಿ ಸೋಂಕು ಹರಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ದುಬೈನಿಂದ ಬಂದ ನೂರು ಮಂದಿಯಲ್ಲಿ ಇಬ್ಬರು ಎಂಎಲ್‌ಎ ಗಳಿದ್ದು, ಅವರನ್ನೂ ಗೃಹಬಂಧನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

 

Share Post

Leave a Reply

error: Content is protected !!