ಕೋವಿಡ್-19 ಕಾಶ್ಮೀರದಲ್ಲಿ 2ನೇ ಬಲಿ: ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

ಶ್ರೀನಗರ: ಕೋವಿಡ್​-19 ಮಹಾಮಾರಿಗೆ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಜಮ್ಮು ಕಾಶ್ಮೀರದಲ್ಲಿ ಸೋಂಕಿತ ಮೃತಪಟ್ಟಿದ್ದು, ಇಂದು ಎರಡನೇ ಸಾವು ಸಂಭವಿಸಿದೆ. ದೇಶದಲ್ಲಿ ಈವರೆಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

 ಬೆಳಗ್ಗೆ 45 ವರ್ಷದ ಸೋಂಕಿತನೊಬ್ಬ ಗುಜರಾತ್​​ನಲ್ಲಿ ಬಲಿಯಾಗಿದ್ದ.  ಇದರಿಂದಾಗಿ ಗುಜರಾತ್​ನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಐದಕ್ಕೇರಿತ್ತು.  ಮೃತಪಟ್ಟ ವ್ಯಕ್ತಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಗುಜರಾತ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!