3 ತಿಂಗಳು ಸಾಲದ ಇಎಂಐ ಮುಂದೂಡಿಕೆ- ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ನವದೆಹಲಿ: ಕೊರೊನಾ ವೈರಸ್​ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಆರ್​ಬಿಐ ರೆಪೋ ದರ ಕಡಿತಗೊಳಿಸಿದೆ.

ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೆಪೋ ದರವನ್ನು ಶೇ.5.1ರಿಂದ ಶೇ.4.4ಕ್ಕೆ ಇಳಿಸಲಾಗಿದೆ ಎಂದರು.

ರಿವರ್ಸ್​ ರೆಪೋ ದರವನ್ನು ಶೇ.90 ಇಳಿಕೆ ಮಾಡಲಾಗಿದೆ. ಸಣ್ಣ ಉದ್ದಿಮೆಗಳು ಅನುಭವಿಸುತ್ತಿರುವ ನಷ್ಟವನ್ನು ಗಮನಿಸಲಾಗಿದೆ. ಕೊರೊನಾ ವೈರಸ್​ ದೇಶಕ್ಕೆ ಕಠಿಣ ಸ್ಥಿತಿಯನ್ನು ತಂದಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೂರು ತಿಂಗಳು ಗೃಹ ಸಾಲ ಇಎಂಐ ಇಲ್ಲ: ಮುಂದಿನ ಮೂರು ತಿಂಗಳು ಗೃಹ ಸಾಲದ ಮೇಲಿನ ಇಎಂಐ ಕಟ್ಟುವಂತಿಲ್ಲ. ಈ ನೀತಿ ಮಾರ್ಚ್​1ಕ್ಕೆ ಪೂರ್ವ ಅನ್ವಯವಾಗಲಿದೆ. ಈ ನೀತಿ ರಾಷ್ಟ್ರದ ಎಲ್ಲ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳಿಗೂ ಅನ್ವಯವಾಗಲಿದೆ. ವಾಹನ ಸಾಲ ಹಾಗೂ ವೈಯಕ್ತಿಕ ಸಾಲಕ್ಕೂ ಇದು ಅನ್ವಯವಾಗಲಿದೆ.

 

Share Post

Leave a Reply

Your email address will not be published. Required fields are marked *

error: Content is protected !!