ಕೆಎಸ್‌ಆರ್‌ಟಿಸಿ- ರೋಟೇಶನ್ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ತಾಂತ್ರಿಕ ಸಿಬ್ಬಂದಿಗೆ ಸೂಚನೆ.

ಬೆಂಗಳೂರು:-ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಘಟಕಗಳಲ್ಲಿ ಕಾರ್ಯನಿರ್ವಹಿಸುವ ತಾಂತ್ರಿಕ ಸಿಬ್ಬಂದಿಗೆ ರೋಟೇಶನ್ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಸೂಚಿಸಿದೆ.

ಘಟಕಗಳಲ್ಲಿರುವ ತಾಂತ್ರಿಕ ಮೇಲ್ವಿಚಾರಕರು ಹಾಗೂ ಸಿಬ್ಬಂದಿಯನ್ನು ಸಮನಾಗಿ ಎರಡು ತಂಡವಾಗಿ ರಚಿಸಬೇಕು ಎಂದು ಸಂಸ್ಥೆಯ ಮುಖ್ಯ ತಾಂತ್ರಿಕ ಅಭಿಯಂತರರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಒಂದು ವಾರ ಒಂದು ತಂಡದಂತೆ ಕಾರ್ಯನಿರ್ವಹಣೆ ಮಾಡಲು ಯೋಚಿಸಿದ್ದು, ಪ್ರತಿ ದಿನವೂ ಒಂದು ತಂಡ ಘಟಕದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.ಸಿಬ್ಬಂದಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಸಲಿಸುವಂತೆ ಸೂಚಿಸಲಾಗಿದೆ.

ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ಅಗತ್ಯವಿರುವಷ್ಟು ಮಾತ್ರ ಸಿಬ್ಬಂದಿ ಮಾತ್ರ ಇರಬೇಕು.50 ವರ್ಷ ಮೇಲ್ಪಟ್ಟ ಹಾಗೂ ಗಂಭೀರ ಕಾಯಿಲೆ ಇರುವ ಸಿಬ್ಬಂದಿಯನ್ನು ತಂಡದಲ್ಲಿ ಸೇರಿಸಬಾರದು. ಒಂದು ವೇಳೆ ರಜೆ ಕೋರಿದರೆ ತಕ್ಷಣವೇ ಮಂಜೂರು ಮಾಡಬೇಕು ಸೂಚಿಸಲಾಗಿದೆ.

ಜಿಲ್ಲಾ ಮುಖ್ಯ ಬಸ್ ನಿಲ್ದಾಣಗಳಲ್ಲಿ ತುರ್ತು ಅಥವಾ ಅನಿವಾರ್ಯ ಸಂದರ್ಭದಲ್ಲಿ ಬೇಕಾಗುವ ಅಗತ್ಯ ಸಿಬ್ಬಂದಿಗಳನ್ನು ಅಷ್ಟೇ ಘಟಕದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು.
ಘಟಕ ಮತ್ತು ಕಾರ್ಯಗಾರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಗಳನ್ನು ಧರಿಸಿರಬೇಕು. ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು.

ನಿಲುಗಡೆ ಸ್ಥಳದಲ್ಲಿ ಬಸ್ಸಿನಿಂದ ಬಸ್ಸಿಗೆ ಎರಡು ಅಡಿ ಅಂತರ ಇರಬೇಕು. ಪ್ರತಿ ಸಿಬ್ಬಂದಿ ಒಂದು ಮೀಟರ್ ಅಂತರದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ನೈರ್ಮಲ್ಯ ಕಾಪಾಡಬೇಕೆಂದು ಸೂಚಿಸಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!