ಕೋವಿಡ್-19: ಫೇಸ್ ಬುಕ್, ಮೆಸೆಂಜರ್, ಹೆಲ್ಪ್ ಡೆಸ್ಕ್ ಆರಂಭಿಸಿದ ಭಾರತ ಸರ್ಕಾರ

Mandatory Credit: Photo by Valentin Wolf/imageBROKER/REX/Shutterstock (9433091a) Smartphone screen with Facebook app icon VARIOUS

ನವದೆಹಲಿ: ಸಾಂಕ್ರಾಮಿಕ ರೋಗವಾದ ಕೋವಿಡ್-19 ವಿರುದ್ಧ ಹೋರಾಡಲು ಆರೋಗ್ಯ ಸಚಿವಾಲಯ (Ministry of Helth and MyGov) ಫೇಸ್ ಬುಕ್ ಮೆಸೆಂಜರ್ ನಲ್ಲಿ ಹೆಲ್ಪ್ ಡೆಸ್ಕ್ ಒಂದನ್ನು ಆರಂಭಿಸಿದೆ. ಇದು ಕೋವಿಡ್ 19 ವೈರಸ್ ನ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

ಈ ಸಹಾಯವಾಣಿಯು ಕೋವಿಡ್ -19 ವಿರುದ್ದ ಹೋರಾಡಲು ಯಾವುದೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ. ಈ ಕುರಿತು MyGov ನ ಸಿಇಓ ಅಭಿಷೇಕ್ ಸಿಂಗ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

https://M.me/MyGovIndia https://facebook.com/MyGovIndia/ ಈ ಲಿಂಕ್ ಮೂಲಕ ನಿಮಗೆ ಬೇಕಾದ ಅಗತ್ಯ ಮಾಹಿತಿ ಪಡೆಯಬಹುದು.

ಭಾರತ ಸರ್ಕಾರ ಈ ಮೊದಲು ವಾಟ್ಸಪ್ ನಲ್ಲಿ ಕೋವಿಡ್ 19 ವಿರುದ್ದ ಜನರಲ್ಲಿ ಅರಿವು ಮೂಡಿಸಲು +919013151515 ಎಂಬ ಸಹಾಯವಾಣಿ ಸಂಖ್ಯೆ ಯನ್ನು ಕೂಡ ಆರಂಭಿಸಿತ್ತು. ಇದರಲ್ಲಿ ವೈರಸ್ ಹರಡುವ ವಿಧಾನ ಸೇರಿದಂತೆ, ಸಾರ್ವಜನಿಕರು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳು ಸೇರಿದಂತೆ ಹಲವು ಮಾಹಿತಿ ನೀಡಲಾಗುತ್ತಿದೆ.

ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಮಾರಾಣಾಂತಿಕವಾಗಿ ಪರಿಣಮಿಸಿದ್ದು, ಹಲವು ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

MyGov launched its Corona Helpdesk chatbot on #Facebook #messenger to get update information and dos and Donts to prevent the spread of #COVID19.

Like the MyGov Facebook at https://t.co/ZvEoT1REWk.

Check out the chatbot on https://t.co/F7A2ornmw3 #IndiaFightsCorona

— abhishek singh (@abhish18)

 

Share Post

Leave a Reply

Your email address will not be published. Required fields are marked *

error: Content is protected !!